ಇಂಡಿಯಲ್ಲಿ ರೈತ ಮಲ್ಲು ಗುಡ್ಲ ನಿಂಬೆ ಗಿಡಗಳಿಗೆ ಟ್ಯಾಂಕರ್​ ಮೂಲಕ ನೀರುಣಿಸುತ್ತಿರುವುದು. 
ಜಿಲ್ಲೆ

ನಿಂಬೆ ಬೆಳೆಗೆ ಟ್ಯಾಂಕರ್​ ನೀರೇ ಗತಿ

Vijayapura - Desk - Shamarao Kulkarni

ಇಂಡಿ: ಜನ-ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಪ್ರಸಕ್ತ ವರ್ಷ ಎಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗಿಲ್ಲ. ಆದರೆ ಬಹು ವಾರ್ಷಿಕ ಬೆಳೆಯಾದ ನಿಂಬೆ ಬೆಳೆ ಉಳಿಸಿಕೊಳ್ಳಲು ರೈತರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ.

ಕಳೆದ ಆರು ವರ್ಷಗಳಿಂದಲೂ ಪ್ರತಿ ಬೇಸಿಗೆಯಲ್ಲಿ ನಿಂಬೆ ಗಿಡಗಳನ್ನು ಉಳಿಸಿಕೊಳ್ಳಲು ತಾಲೂಕಿನ ವಿವಿದ ಗ್ರಾಮಗಳ ಜನರು ಟ್ಯಾಂಕರ್​ ಮೂಲಕ ನೀರುಣಿಸಿ ನಿಂಬೆ ಗಿಡಗಳು ಒಣಗದಂತೆ ಕಾಪಾಡಿಕೊಂಡು ಬರುತ್ತಿದ್ದಾರೆ.

ಇದಕ್ಕೆ ನಿದರ್ಶನವೆಂಬಂತೆ ಇಂಡಿ ಪಟ್ಟಣದ ಚಿಕ್ಕಬೇವನೂರ ರಸ್ತೆಯ ಮಲ್ಲಪ್ಪ ಗುಡ್ಲ ಎಂಬ ಯುವ ರೈತ 150 ನಿಂಬೆ ಗಿಡಗಳನ್ನು ೋಷಿಸುತ್ತಿದ್ದು, ಪ್ರತಿ 10 ದಿನಕ್ಕೊಮ್ಮೆ 12 ಟ್ಯಾಂಕರ್​ ನೀರುಣಿಸಿ ನಿಂಬೆ ಗಿಡಗಳನ್ನು ಒಣಗದಂತೆ ಕಾಪಾಡಿಕೊಂಡು ಬರುತ್ತಿದ್ದಾರೆ. 1 ಟ್ಯಾಂಕರ್​ ನೀರಿಗೆ 800 ರೂಪಾಯಿಯಂತೆ 12 ಟ್ಯಾಂಕರ್​ಗೆ 9600 ರೂಪಾಯಿ ಒಂದು ಬಾರಿ ನೀರು ಬಿಡಲು ರ್ಖಚಾಗುತ್ತದೆ.

ಪ್ರಸಕ್ತ ವರ್ಷ ೆಬ್ರುವರಿ 25 ರಿಂದ ಮೇ 15 ರವರೆಗೆ 5 ಬಾರಿ ಟ್ಯಾಂಕರ್​ ಮೂಲಕ ನೀರುಣಿಸಿದ್ದಾರೆ. 48 ಸಾವಿರ ರೂಪಾಯಿ ಖರ್ಚು ಮಾಡಿ ನಿಂಬೆ ಗಿಡಗಳನ್ನು ಉಳಿಸಿಕೊಂಡಿದ್ದಾಗಿ ಮಲ್ಲು ಗುಡ್ಲ ತಿಳಿಸಿದ್ದಾರೆ.

ಇವರಷ್ಟೇ ಅಲ್ಲದೆ ಅವರ ಜಮೀನಿನ ಪಕ್ಕದಲ್ಲಿನ ಹತ್ತಾರು ಜನ ರೈತರು ಸಹ ಇದೇ ರೀತಿ ಟ್ಯಾಂಕರ್​ ನೀರು ಖರೀದಿಸಿ ನಿಂಬೆ ಬೆಳೆ ಉಳಿಸಿಕೊಳ್ಳುತ್ತಿದ್ದಾರೆ.