ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಅಕೀಲ್​ ಅಹ್ಮದ್​ ನದಾ, ಆಕ್ಸರ್ಡ್​ ಸಂಸ್ಥೆ ನಿರ್ದೇಶಕ ದರ್ಶನಗೌಡ ಪಾಟೀಲ ಅವರನ್ನು ಮುದ್ದೇಬಿಹಾಳದಲ್ಲಿ ಸಚಿವ ಮಧು ಬಂಗಾರಪ್ಪ ಸನ್ಮಾನಿಸಿದರು. ಶಾಸಕ ಸಿ.ಎಸ್​. ನಾಡಗೌಡ, ಇಸ್ಮಾಯಿಲ್​ ಮನಿಯಾರ, ನಾಸೀರ್​ಅಲಿ ಪಿಂಜಾರ ಇತರರಿದ್ದರು. 
ಜಿಲ್ಲೆ

ಗ್ರಾಮೀಣ ಭಾಗದ ಶಾಲೆ ರಾಜ್ಯಮಟ್ಟದ ಸಾಧನೆಗೆ ಮೆಚ್ಚುಗೆ

Vijayapura - Desk - Shamarao Kulkarni

ಮುದ್ದೇಬಿಹಾಳ: ನಾಗರಬೆಟ್ಟ ಗುಡ್ಡದ ಬಳಿಯ ಆಕ್ಸರ್ಡ್​ ಪಾಟೀಲ್ಸ್​ ಸಮೂಹ ಶಿಣ ಸಂಸ್ಥೆಯ ಆಕ್ಸರ್ಡ್​ ಪಾಟೀಲ್ಸ್​ ಇಂಗ್ಲಿಷ್​ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀೆ&1ರಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿರುವ ಅಕೀಲ್​ ಅಹ್ಮದ್​ ನಾಸೀರ್​ ಅಲಿ ನದಾಫ್​ ಅವರನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಿಣ ಸಚಿವ ಮಧು ಬಂಗಾರಪ್ಪ ಶನಿವಾರ ಸನ್ಮಾನಿಸಿ ಆತನ ಮತ್ತು ಶಾಲೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಕೀಲ್​ ಅಹ್ಮದ್​ ಸರ್ಕಾರಿ ಶಿಕ ದಂಪತಿಯ ಮಗನಾಗಿರುವುದನ್ನು ಅರಿತ ಅವರು ಗ್ರಾಮೀಣ ಭಾಗದ ಶಾಲೆಯೊಂದು ರಾಜ್ಯಮಟ್ಟದ ಸಾಧನೆ ಮಾಡಿರುವುದು ಶ್ಲಾನೀಯ. ರಾಜ್ಯಾದ್ಯಂತ 22 ವಿದ್ಯಾರ್ಥಿಗಳು ಈ ಬಾರಿ 625ಕ್ಕೆ 625 ಅಂಕ ಪಡೆದಿರುವುದು ನಮ್ಮ ಶಿಣದ ಗುಣಮಟ್ಟಕ್ಕೆ ಕನ್ನಡಿಯಾಗಿದೆ ಎಂದರು.

ಸಂಸ್ಥೆ ನಿರ್ದೇಶಕ, ಪ್ರೌಢಶಾಲಾ ವಿಭಾಗದ ಉಸ್ತುವಾರಿ ದರ್ಶನಗೌಡ ಪಾಟೀಲ, ಮುಖ್ಯಾಧ್ಯಾಪಕ ಇಸ್ಮಾಯಿಲ್​ ಮನಿಯಾರ್​ ಅವರನ್ನು ಸಚಿವರು ಎಲ್ಲರ ಪರವಾಗಿ ಸನ್ಮಾನಿಸಿದರು.

ಶಾಸಕ ಸಿ.ಎಸ್​. ನಾಡಗೌಡ, ತಹಸೀಲ್ದಾರ್​ ಬಲರಾಮ ಕಟ್ಟಿಮನಿ, ಡಿಡಿಪಿಐ ತಸ್ಮೀಮಾಬಾನು ಕೊಲ್ಹಾರ, ಬಿಇಒ ಬಿ.ಎಸ್​. ಸಾವಳಗಿ, ತಾಪಂ ಇಒ ನಿಂಗಪ್ಪ ಮಸಳಿ, ಶಿಕರ ಸಂದ ಅಧ್ಯ ಬಿ.ಎಚ್​. ಮುದ್ನೂರ, ಪ್ರಧಾನ ಕಾರ್ಯದರ್ಶಿ ಎನ್​.ಎಸ್​. ತುರಡಗಿ, ಶಿಕ ನಾಸೀರ್​ಅಲಿ ಪಿಂಜಾರ, ಪುರಸಭೆ ಅಧ್ಯ ಮಹೆಬೂಬ ಗೊಳಸಂಗಿ, ಮುಖಂಡರಾದ ಎಂ.ಬಿ. ನಾವದಗಿ, ಸಂತೋಷ ಚವ್ಹಾಣ ಇತರರಿದ್ದರು.