ಬಸವನಬಾಗೇವಾಡಿ: ಬಸವಣ್ಣವರ ಕಾಯಕ ದಾಸೋಹ ಸಂಸತಿ ಪ್ರತಿಯೊಬ್ಬರು ಪಾಲಿಸಬೇಕು ಎಂದು ತಾಳಿಕೋಟೆಯ ಜೆ.ಎಸ್.ಜಿ.ಪೌಂಡೇಶನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಸವೋತ್ಸವ ಹಾಗೂ ವಚನ ಚಿಂತನ ಮತ್ತು ಸಾಂಸತಿಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವಿರಕ್ತಮಠದ ಸಿದ್ಧ್ದಲಿಂಗ ಶ್ರೀಗಳು ಮಾತನಾಡಿ, ಬಸವಣ್ಣವನರು ನಮಗೆ ಕೊಟ್ಟ ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ಪಠಣ ಮಾಡಬೇಕು ಎಂದರು.
ಪುರಸಭೆ ಅಧ್ಯೆ ಜಗದೇವಿ ಗುಂಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರ ಸೇವಾ ಸಮಿತಿ ಅಧ್ಯ ಈರಣ್ಣ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ತಹಸೀಲ್ದಾರ್ ಜೆ.ಎಸ್.ಚಿನವಾಲ, ವೀರೇಶ ವಾಲಿ, ಸಾ ಹಿರೇಮಠ, ಬಿಷ್ಟಗೊಂಡ,ಯಮನಪ್ಪ ಮಿಣಜಗಿ ಪಾಲ್ಗೊಂಡಿದ್ದರು.