ವಿಜಯಪುರ ನಗರದ ಸರ್ಕಾರಿ ನರ್ಸಿಂಗ್​ ಕಾಲೇಜಿನ 50ಕ್ಕೂ ಅಧಿಕ ವಿದ್ಯಾರ್ಥಿಗಳು ವಿಜಯವಾಣಿ ಮುದ್ರಣ ವಿಭಾಗಕ್ಕೆ ಭೇಟಿ ನೀಡಿದ ಸಂದರ್ಭ.  
ಜಿಲ್ಲೆ

ಜ್ಞಾನಾಭಿವೃದ್ಧಿಗೆ ದಿನಪತ್ರಿಕೆಗಳು ಪೂರಕ

Vijayapura - Desk - Shamarao Kulkarni

ವಿಜಯಪುರ: ಪ್ರಪಂಚದ ನಿತ್ಯ ವಿದ್ಯಾಮಾನಗಳ ಸಮಗ್ರ ಜ್ಞಾನಕ್ಕಾಗಿ ದಿನಪತ್ರಿಕೆಗಳ ಓದು ಪೂರಕವಾಗಿದ್ದು, ವಿದ್ಯಾರ್ಥಿಗಳು ನಿತ್ಯ ಅದರ ಓದಿಗಾಗಿ ಅರ್ಧ ತಾಸು ಮೀಸಲಿಡಿ ಎಂದು ಸರ್ಕಾರಿ ಆಸ್ಪತ್ರೆಯ ನರ್ಸಿಂಗ್​ ಕಾಲೇಜಿನ ಪ್ರಾಧ್ಯಾಪಕ ರವಿ ಕೂಚಬಾಳ ಸಲಹೆ ನೀಡಿದರು.

ಸರ್ಕಾರಿ ನರ್ಸಿಂಗ್​ ಕಾಲೇಜಿನ 50ಕ್ಕೂ ಅಧಿಕ ವಿದ್ಯಾರ್ಥಿಗೊಂದಿಗೆ ಶುಕ್ರವಾರ ವಿಜಯವಾಣಿ ಪತ್ರಿಕೆ ಕಚೇರಿ ಹಾಗೂ ಮುದ್ರಣಾಲಯಕ್ಕೆ ಭೇಟಿ ನೀಡಿ ಅವರು ಮಾತನಾಡಿ, ಕಾಲಾಮಾನಕ್ಕೆ ತಕ್ಕಂತೆ ಮಾಧ್ಯಮ ಕ್ಷೇತ್ರವು ಬದಲಾವಣೆ ಕಂಡಿದ್ದರೂ ಮುದ್ರಣ ಮಾಧ್ಯಮ ತನ್ನ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಂಡು, ಕರಾರುವಾಕ್​ ಸುದ್ದಿಗಳನ್ನು ಕೊಡುತ್ತಿರುವುದು ಶ್ಲಾನೀಯ ಎಂದರು.

ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಓದುವ ಸಂಸತಿ ಣಿಸುತ್ತಿದ್ದು, ವಿಜಯವಾಣಿ ಸಾಮಾಜಿಕ ಬದ್ಧತೆಯಿಂದ ಓದುಗರನ್ನು, ವಿದ್ಯಾರ್ಥಿಗಳನ್ನು ತನ್ನ ಕಚೇರಿಗೆ ವಿಆರ್​ಎಲ್​ ಸೂಪರ್​ ಬಸ್​ನಲ್ಲಿ ಕರೆಸಿಕೊಂಡು ಅವರಿಗೆ ಸುದ್ದಿಮನೆಯ ಸಂಪೂರ್ಣ ದರ್ಶನ ಮಾಡಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಇದು ಜನಾನುರಾಗಿಯಾಗಿ ಪರಿವರ್ತನೆ ಹೊಂದಿದೆ ಎಂದು ಹೇಳಿದರು.

ಸ್ಥಾನಿಕ ಸಂಪಾದಕ ಕೆ.ಎನ್​. ರಮೇಶ್​ ಮಾತನಾಡಿ, ಪತ್ರಿಕೆಗಳು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ನಿಖರ ಸುದ್ದಿಗಳನ್ನು ಕೊಡುವ ಮೂಲಕ ತನ್ನ ಬದ್ಧತೆಯನ್ನು ನಿರಂತರವಾಗಿ ಪ್ರದರ್ಶಿಸುತ್ತಿದೆ. ಕಾಲಮಾನಕ್ಕೆ ತಕ್ಕಂತೆ ಸುದ್ದಿಗಳ ಜೊತೆಗೆ ವಿಶೇಷ ವರದಿಗಳ ಮೂಲಕ ಗಮನಸೆಳೆಯುತ್ತಿದೆ. ಇಂದಿನ ಯುವ ಪೀಳಿಗೆ ಮೊಬೈಲ್​ಗಳಿಗೆ ಅಡಿಟ್​ ಆಗದೆ ಪುಸ್ತಕಗಳು, ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು.

ನಂತರ ವಿದ್ಯಾರ್ಥಿಗಳು ಸುದ್ದಿಮನೆಯ ಪ್ರಮುಖ ವಿಭಾಗಗಳನ್ನು ಭೇಟಿ ಮಾಡಿ, ಸಂವಾದ ನಡೆಸಿ ಸಮಗ್ರ ಮಾಹಿತಿಗಳನ್ನು ಪಡೆದುಕೊಂಡರು. ನಂತರ ಮುದ್ರಣ ವಿಭಾಗಕ್ಕೆ ತೆರಳಿ ತಾಂತ್ರಿಕ ವಿಭಾಗಗಳ ಜ್ಞಾನ ಪಡೆದುಕೊಂಡು ಆಶ್ಚರ್ಯ ವ್ಯಕ್ತಪಡಿಸಿದರು.

ಮುದ್ರಣ ವಿಭಾಗದ ಉಸ್ತುವಾರಿ ರವಿ ಗುಡಗೇರಿ ಸಿಟಿಪಿ, ಪ್ಲೇಟ್​ ಮೇಕಿಂಗ್​, ಕಲರ್​ ಕಾಂಬಿನೇಷನ್​, ಮುದ್ರಣ ಮುಂತಾದ ವಿಷಯಗಳ ಪೂರ್ಣ ಮಾಹಿತಿ ಒದಗಿಸಿದರು. ಜಾಹೀರಾತು ವಿಭಾಗದ ನಿಖಿಲ್​ ಹೊಳ್ದೂರ, ಪ್ರಸರಣ ವಿಭಾಗದ ಮುಖ್ಯಸ್ಥ ಈರಣ್ಣ ಅವಟಿ, ಸಂತೋಷ ಗೋಡಿಕಟ್ಟಿ ಇತರ ಸಿಬ್ಬಂದಿ ಉಪಸ್ಥಿತರಿದ್ದರು.