ನಾಲತವಾಡ ವಿನಾಯಕ ನಗರದಲ್ಲಿ ಗುರುವಾರ ಜರುಗಿದ ಬಸವ ಜಯಂತಿಯಲ್ಲಿ ಆಲಮೇಲದ ಜಗದೇವ ಮಲ್ಲಿ ಬೊಮ್ಮ ಸ್ವಾಮೀಜಿ ಮಾತನಾಡಿದರು. 
ಜಿಲ್ಲೆ

ಮಹಿಳಾ ಸಮಾನತೆ ಬಸವಾದಿ ಶರಣರ ಕೊಡುಗೆ

Vijayapura - Desk - Shamarao Kulkarni

ನಾಲತವಾಡ: ಮಹಿಳಾ ಸಮಾನತೆ ಬಸವಾದಿ ಶರಣರ ಕೊಡುಗೆಯಾಗಿದೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿ ಬೊಮ್ಮ ಸ್ವಾಮೀಜಿ ಹೇಳಿದರು.

ಬಸವ ಕೇಂದ್ರ ಹಾಗೂ ವಿನಾಯಕ ನಗರದ ಸಹಯೋಗದೊಂದಿಗೆ ವಿನಾಯಕ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,ವಚನಕಾರರು ಸಮಾನತೆ, ಮಹಿಳಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 800 ವರ್ಷಗಳ ಬಳಿಕ ಸಾಲ್ಯ ಕಾಣುತ್ತಿದೆ ಎಂದರು.

ಕೊಡೇಕಲ್ಲದ ಇಮಾಮ್​ ಸಾಹೇಬ್​ ಅತ್ತಾರ, ಎ.ಎಸ್​.ಪಟ್ಟಣಶೆಟ್ಟಿ ಅನುಭಾವ ನೀಡಿದರು.

ಪಿ.ಜಿ.ಬಿರಾದಾರ, ಬಸವರಾಜ ಪೂಜಾರಿ,ರಾಜು ಹಾದಿಮನಿ, ಸಿದ್ರಾಮಯ್ಯ ಜೀವಣಗಿಮಠ,ನಿರ್ಮಲಾ ಗದ್ದನಕೇರಿ, ಶ್ರೇಯಾ ತಳವಾರ, ವಿನುತಾ ನೂಲಿನವರ, ಬಸವರಾಜ ತಾಳಿಕೋಟಿ,ಎ.ಎಸ್​.ಪಟ್ಟಣಶೆಟ್ಟಿ, ಇಮಾಮಸಾಬ ಅತ್ತಾರ, ಬಸವರಾಜ ಹಾದಿಮನಿ, ಮಾಜಿ ಸೈನಿಕ ಪಿ.ಜಿ.ಬಿರಾದಾರ, ನಿಂಗಣ್ಣ ಅಗ್ನಿ, ಸಂಗಣ್ಣ ಬಿರಾದಾರ,ಅಮರೇಶ ಬಾಗೇವಾಡಿ, ಶಂಕ್ರಣ್ಣ ನಾಗರದಿನ್ನಿ, ಸಂಗಣ್ಣ ಗಡೇದ, ಕೆ.ಆರ್​.ಬಿರಾದಾರ, ಚಂದ್ರು ಗಂಗನಗೌಡ್ರ, ಸಿದ್ರಾಮಪ್ಪ ಹಂಪನಗೌಡ ಇದ್ದರು.