ಶ್ರೀ ಸತ್ಯಾತ್ಮತಿರ್ಥ 
ಜಿಲ್ಲೆ

ಸಾಮೂಹಿಕ ಉಪನಯನ 25ರಂದು

Vijayapura - Desk - Shamarao Kulkarni

ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಗುರುರಾಜ ಪಾದಯಾತ್ರಾ ಅಷ್ಟೋತ್ತರ ಭಜನಾ ಮಂಡಳಿಯಿಂದ ಮೇ 25ರಂದು ಸಾಮೂಹಿಕ ಉಪನಯನ ಹಮ್ಮಿಕೊಳ್ಳಲಾಗಿದೆ.

ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತಿರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಹಾಗೂ ಹಿರಿಯ ವಿದ್ವಾಂಸರಾದ ಪಂ ಮಧ್ವಾಚಾರ್ಯ ಮೊಕಾಶಿ ಮಾರ್ಗದರ್ಶನದಲ್ಲಿ ಜರುಗಲಿರುವ ಸಾಮೂಹಿಕ ಉಪನಯನದಲ್ಲಿ 40 ವಟುಗಳ ಹೆಸರು ನೋಂದಣಿಯಾಗಿವೆ. 25ರಂದು ಬೆಳಗ್ಗೆ ಶ್ರೀಗಳಿಂದ ಮುದ್ರಾಧಾರಣೆ, ಬೆಳಗ್ಗೆ 6ಕ್ಕೆ ಪುಣ್ಯಹವಾಚನ, ಮಾತೃಭೋಜನ, ಬೆಳಗ್ಗೆ 9ಕ್ಕೆ ಅತಾರೋಪಣ, ಯಜ್ಞೋಪವಿತ ಧಾರಣೆ, ಮಾತೃಭಿಾ, ವಟುಗಳಿಗೆ ಶ್ರೀಪಾದಂಗಳವರಿಂದ ಬ್ರಹ್ಮೋಪದೇಶ, ನಂತರ ಶ್ರೀಗಳಿಂದ ಸಂಸ್ಥಾನ ಪೂಜೆ, ಅಮೃತೋಪದೇಶ ನಂತರ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಬೇರೆ ಊರಿನವರು ಉಪನಯನಕ್ಕೆ ಹೆಸರು ನೋಂದಾಯಿಸಿದವರಿಗೆ 24 ರಂದು ಸಂಜೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಮಂಡಳಿ ಅಧ್ಯ ಗೋಪಾಲ ದೇಶಪಾಂಡೆ, ಉಪಾಧ್ಯ ಸಂಜೀವ ಜಹಾಗೀರದಾರ, ಸದಸ್ಯರಾದ ವಿಜಯೇಂದ್ರಾಚಾರ್ಯ ನಾಮಣ್ಣಾ, ವಾದಿರಾಜಾಚಾರ್ಯ ಅವಧಾನಿ, ವಲ್ಲಭಭಟ್ಟ ಮನಗೂಳಿ, ಕೃಷ್ಣಾ ಕುಲಕರ್ಣಿ, ಅರವಿಂದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.