ನಾಲತವಾಡ: ವಿದ್ಯಾರ್ಥಿಗಳು ಹಾಗೂ ಜನತೆಗೆ ಕಡಿಮೆ ದರದಲ್ಲಿ ಹಸಿವು ನೀಗಿಸುವ ಮಹತ್ವಾಕಾಂ ಯೋಜನೆ ಇಂದಿರಾ ಕ್ಯಾಂಟೀನ್ ಶ್ರೀದಲ್ಲೆ ಉದ್ಘಾಟನೆಯಾಗಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿನ ಇಂದಿರಾ ಕ್ಯಾಂಟಿನ್ಗೆ ಮಂಗಳವಾರ ಸಿಬ್ಬಂದಿಯೊಂದಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ನೀಡುವ ಉಪಾಹಾರ ಹಾಗೂ ಊಟದ ಮಾಹಿತಿ, ಶುಚಿತ್ವ ಕುರಿತು ವಿವರಿಸಿದರು.
ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರ ಆಸಕ್ತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಶ್ರೀ ಉದ್ಘಾಟಿಸುವ ಮೂಲಕ ಬಡ ಜನರ ಸೇವೆಗೆ ಸಮರ್ಪಿಸಲಾಗುವುದು ಎಂದರು.
ಕ್ಯಾಂಟೀನ್ನಲ್ಲಿ ಬೆಳಗ್ಗೆ ಇಡ್ಲಿ, ಕೇಸರಿ ಬಾತ್, ಜೋಳದ ರೊಟ್ಟಿ, ತರಕಾರಿ, ಅನ್ನ ಹಾಗೂ ಸಾರು ಸೇರಿ ಇತರ ಖಾದ್ಯಗಳನ್ನು ಬೇಡಿಕೆಗೆ ಅನುಗುಣವಾಗಿ ಸಿಬ್ಬಂದಿ ತಯಾರಿಸಲಿದ್ದಾರೆ ಎಂದರು.
ಇಂದಿರಾ ಕ್ಯಾಂಟೀನ್ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯಿಲ್ಲ.ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದರೆ ಮಾತ್ರ ವಿದ್ಯಾರ್ಥಿನಿಯರು, ಮಹಿಳೆಯರು ಇಂದಿರಾ ಕ್ಯಾಂಟೀನ್ ಬಳಿ ತೆರಳಲು ಸಾಧ್ಯ. ಇಲ್ಲದ್ದಿದ್ದರೆ ಕ್ಯಾಂಟೀನ್ ಆಶಯಕ್ಕೆ ಹೊಡೆತ ಬೀಳಲಿದೆ. ಕ್ಯಾಂಟೀನ್ ಸುತ್ತಲಿನ ಪ್ರದೇಶ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ದಲಿತ ಸಂರ್ಷ ಸಮಿತಿ ಜಿಲ್ಲಾ ಸಂಯೋಜಕ ಮಂಜುನಾಥ ಕಟ್ಟಿಮನಿ ಮನವಿ ಮಾಡಿದರು.
ಕ್ಯಾಂಟೀನ್ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಇಂಜಿನಿಯರ್ ವೀರೇಶ ದೊಡಮನಿ ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಣಮಂತ ಕುರಿ, ವೀರೇಶ ದೊಡಮನಿ, ಪ್ರಕಾಶ ಸಜ್ಜನ, ಅಲ್ತ್ಾ ಮೂಲಿಮನಿ, ವೀರೇಶ ತಂಗಡಗಿ, ಸಿದ್ದಲಿಂಗ ಪೂಜಾರಿ, ಸದ್ದಾಮ್ ತಂಗಡಿ, ರಜೀಬಸಾಬ ಮಲಗಲದಿನ್ನಿ, ಇಮಾಮಸಾಬ ತಂಗಡಗಿ ಇದ್ದರು.