ಬಿಜ್ಜೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ಜರುಗಿದ ಶಾಲಾ ಪ್ರಾರಮಭೋತ್ಸವ. 
ಜಿಲ್ಲೆ

ವೈಭವದ ಶಾಲಾ ಪ್ರಾರಂಭೋತ್ಸವ

Vijayapura - Desk - Shamarao Kulkarni

ನಾಲತವಾಡ: ಬೇಸಿಗೆ ರಜೆಯ ಬಳಿಕ ಮೇ 29ರಂದು ಶಾಲೆ ಪುನಾರಂಭನಿಮಿತ್ತ ಬಿಜ್ಜೂರ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವವನ್ನು ಸಂಬ್ರಮದಿಮದ ಆಚರಿಸಲಾಯಿತು.ಮಕ್ಕಳಿಂದಲೇ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಶೈಣಿಕ ವರ್ಷದ ಚೈತನ್ಯ ತುಂಬಿದರು.

ಶಿಕರು ಹಾಗೂ ಎಸ್​.ಡಿ.ಎಂ.ಸಿ ಆಡಳಿತ ಮಂಡಳಿ ಸದಸ್ಯರು ಗೇಟಿನಲ್ಲೇ ಮಕ್ಕಳಿಗೆ ಪುಷ್ಪ ವಿತರಿಸಿ ಸ್ವಾಗತ ನೀಡಿದರು. ಬಳಿಕ ಶಾಲಾ ಕೊಠಡಿಯಲ್ಲಿ ಲಕ್ಷಿ$್ಮದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಎಸ್​.ಡಿ.ಎಂ.ಸಿ ಅಧ್ಯ ಮಾನಪ್ಪ ಬಿರಾದಾರ ಮಾತನಾಡಿ, ಶೈಣಿಕ ವರ್ಷ ಆರಂಭವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದರು.

ಮುಖ್ಯಗುರು ಅಶೋಕ ನರಸಲಗಿ, ಎಸ್​.ಡಿ.ಎಂ.ಸಿ ಸದಸ್ಯರಾದ ಮಲ್ಲು ತಳವಾರ, ಗುರು ಬಿರಾದಾರ, ಮುಖಂಡರಾದ ಹುಲಗಪ್ಪ ಮಾದರ, ಕಲ್ಲಪ್ಪ ಮಂಕಣಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.