ಇಂಡಿ: ಮನುಕುಲ ಉದ್ದಾರಕ್ಕಾಗಿ ಕಠಿಣ ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವರಾಶಿಗಳನ್ನು ಉದ್ಧ್ದರಿಸಿದ ಭಗೀರಥ ಮಹರ್ಷಿಗಳ ಕೊಡು ಅಪಾರವಾಗಿದೆ ಎಂದು ಶಿರಶ್ಯಾಡದ ಅಭಿನವ ಮುರೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡ ಭಗೀರಥ ಮಹರ್ಷಿ ಜಯಂತಿಯಲ್ಲಿ ಅವರು ಮಾತನಾಡಿದರು.
ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಉಪನ್ಯಾಸಕ ಶಿವಾನಂದ, ಭಗೀರಥ ಮಹರ್ಷಿ ಸಮಾಜ ಸೇವಾ ಸಂ ತಾಲೂಕು ಅಧ್ಯ ಸುರೇಶ ಕರಂಡೆ, ಸಂಗಮೇಶ ಸೋನ್ನ, ಅನೀಲ ರೆಬಿನಾಳ ಭಗೀರಥರ ಕುರಿತು ಮಾತನಾಡಿದರು.
ಭಗೀರಥ ಮಹರ್ಷಿ ಮಹಿಳಾ ಸಂದ ಅಧ್ಯೆ ಅಂಬಿಕಾ ಚನಗೊಂಡ, ಗೌರವಾಧ್ಯೆ ಶಾಂತಬಾಯಿ ನರಳೆ, ಸೋಮಶೇಖರ ಬ್ಯಾಳಿ, ಕಲಪ್ಪ ಕರಂಡೆ, ಸಿದ್ದರಾಮ ಉಪ್ಪಾರ, ದಯಾನಂದ ಹಬ್ಬಳ್ಳಿ, ಶಿವು ಉಪ್ಪಾರ, ಮಾಳು ದಳವಾಯಿ, ಜಟ್ಟೆಪ್ಪ ಉಪ್ಪಾರ, ವಿಠ್ಠಲ ಸೊನ್ನ, ಚಿದು ಉಪ್ಪಾರ, ಸಿದ್ರಾಮ ನರಳೆ, ಪಿಎಸ್ಐ ಸೋಮೇಶ ಗೆಜ್ಜಿ, ಬಾಳು ಮುಳಜಿ, ಅಶೋಕ ಅಕಲಾದಿ, ಕಲ್ಲು ಮೋಸಲಗಿ, ರವಿ ಗವಳಿ, ಪ್ರಶಾಂತ ಲಾಳಸಂಗಿ ಪಾಲ್ಗೊಂಡಿದ್ದರು.