ಯಲಗೂರ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಹಣ  
ಜಿಲ್ಲೆ

ಯಲಗೂರೇಶನ ಹುಂಡಿಯಲ್ಲಿ 54.73 ಲಕ್ಷ ರೂ.

Vijayapura - Desk - Shamarao Kulkarni

ಆಲಮಟ್ಟಿ: ಯಲಗೂರು ಗ್ರಾಮದ ಆಂಜನೇಯ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಗುರುವಾರ ಜರುಗಿತು.

ಬೆಳಗ್ಗೆ 10ಕ್ಕೆ ಆರಂಭವಾದ ದೇವಸ್ಥಾನದ ಮೂರು ಕಬ್ಬಿಣದ ಹುಂಡಿಗಳ ಹಣ ಎಣಿಕೆ ಕಾರ್ಯ ಸಂಜೆ 6ರ ವರೆಗೆ ಜರುಗಿತು. 54, 73,921 ರೂ. ಹಾಗೂ 3.4 ಗ್ರಾಂ ಚಿನ್ನ ಹಾಗೂ 230 ಗ್ರಾಂ ಬೆಳ್ಳಿ ಹುಂಡಿಯಲ್ಲಿ ದೊರೆಕಿದೆ. ಎಣಿಕೆ ವೇಳೆ ವಿಡಿಯೋ ಚಿತ್ರೀಕರಣ, ಪೊಲೀಸ್​ ರಣೆ ಕೈಗೊಳ್ಳ್ಳಲಾಗಿತ್ತು.

ಯಲಗೂರಿನ ಕೆನರಾ ಬ್ಯಾಂಕ್​, ನಿಡಗುಂದಿಯ ಯುನಿಯನ್​ ಬ್ಯಾಂಕ್​, ಬಾಗಲಕೋಟೆಯ ಎಚ್​ಡಿಎ್​ಸಿ ಹಾಗೂ ಯುನಿಯನ್​ ಬ್ಯಾಂಕ್​ ಸಿಬ್ಬಂದಿ, ದೇವಸ್ಥಾನ ಸಮಿತಿಯವರು ಹಾಗೂ ಸ್ಥಳಿಯರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಅನಂತ ಓಂಕಾರ, ಶ್ಯಾಮ ಪಾತ್ರದ, ಗುಂಡರಾವ ಕುಲಕರ್ಣಿ, ಗುಂಡಪ್ಪ ಪೂಜಾರಿ, ಗೋಪಾಲ ಗದ್ದನಕೇರಿ, ಸಂತೋಷ ಪೂಜಾರಿ, ಶ್ರೀಶೈಲ ಡೆಂಗಿ, ಆನಂದ ಪೂಜಾರಿ, ಗುಂಡಪ್ಪ ತಳವಾರ, ಭೀಮಣ್ಣ ಪೂಜಾರಿ, ಯಲಗೂರದಪ್ಪ ಪೂಜಾರಿ, ಗುರುರಾಜ ಪರ್ವತಿಕರ ಉಪಸ್ಥಿತರಿದ್ದರು.

*ಬಾಕ್ಸ್​

ಹುಂಡಿಯಲ್ಲಿ ಬೇಡಿಕೆ ಪತ್ರ

ದೇವಸ್ಥಾನಕ್ಕೆ ಹೋಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯ. ಆದರೆ ಕೆಲ ಭಕ್ತರು ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇವರಿಗೆ ಪತ್ರ ಬರೆದು ಹುಂಡಿಯಲ್ಲಿ ಹಾಕಿರುವುದು ಕಂಡು ಬಂದವು.