ಝಳಕಿ ಗ್ರಾಮದ ಚೌವಡಿಕಟ್ಟಿ ಆವರಣದಲ್ಲಿ ಗಣ್ಯರು ಸುಧಾಂಶು ಗ್ರಂಥ ಬಿಡುಗಡೆಗೊಳಿಸಿದರು.ಸಂಸತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪಂ.ಡಾ.ಕೃಷ್ಣ್ಣ ಜೋಶಿ,ಪಂ.ಪ್ರದ್ಯುಮ್ನಾಚಾರ್ಯ ಪೂಜಾರ,ಶ್ರೀಮಂತ ಕಾಪಸೆ, ರವೀಂದ್ರ ನಾಯ್ಕೋಡಿ, ಶ್ರೀಗುರು ಹೆಬ್ಬಳ್ಳಿ, ವಾಸಂತಿ ಝಳಕಿಕರ ಇದ್ದರು.  
ಜಿಲ್ಲೆ

ಸುಧಾಂಶು ಗ್ರಂಥ ಬಿಡುಗಡೆ

Vijayapura - Desk - Shamarao Kulkarni

ಹೋರ್ತಿ: ಭಟ್ಟ ಭೀಮಾಚಾರ್ಯ ಹಾಗೂ ಭಟ್ಟ ವಾಮನಾಚಾರ್ಯ ಝಳಕಿಕರ ಪರಿಚಯಾತ್ಮಕ ಸುಧಾಂಶ ಗ್ರಂಥ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಸಂಸತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪಂ.ಡಾ.ಕೃಷ್ಣ್ಣ ಜೋಶಿ ಹೇಳಿದರು.

ಝಳಕಿ ಗ್ರಾಮದ ಚೌವಡಿಕಟ್ಟಿ ಆವರಣದಲ್ಲಿ ಸುಧಾಂಶು ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸುಧಾಂಶು ಗ್ರಂಥವು ವಾಸಂತಿ ಝಳಕಿಕರ ಅವರ ಪರಿಶ್ರಮ ಪರಿಮಳದಿಂದ ಅರಳಿದ ಗ್ರಂಥವಾಗಿದೆ. ಇದರಲ್ಲಿ ಭಟ್ಟ ಭೀಮಾಚಾರ್ಯರು ಹಾಗೂ ಭಟ್ಟ ವಾಮನಾಚಾರ್ಯರ ಅದ್ವೀತಿಯ ಪರಿಚಯ ಮೂಡಿ ಬಂದಿದೆ. ಭಾರತೀಯ ತರ್ಕಶಾಸ್ತ್ರ ಪಂರಪರೆಯು ಅತ್ಯಂತ ಪ್ರಾಚಿನವಾಗಿದ್ದು, ಈ ಪರಂಪರೆಯ ಗಂಗಾ ಪ್ರರವಾಹದಂತೆ ಸಹಸ್ರಾರು ವರ್ಷಗಳಿಂದ ಹರಿದುಕೊಂಡು ಬಂದಿದೆ. ಪಂರಪರೆಯಲ್ಲಿ ಭಟ್ಟ ಭೀಮಾಚಾರ್ಯರು ಒಬ್ಬರು ಇವರ ಈ ಸಾರಸ್ವತ ಕೂಡುಗೆ ವಿಶಿಷ್ಟ ವಾಗಿದೆ ಎಂದರು.

ಮಹನೀಯರ ವಿದ್ವತ್​ ಪರಂಪರೆಯ ಚರಿತ್ರೆಯನ್ನು ವಾಸಂತಿಯವರು ಸುಧಾಂಶು ಎಂಬ ಗ್ರಂಥದಲ್ಲಿ ಸುಮದರವಾಗಿ ವಿವರಿಸಿದ್ದಾರೆ ಎಂದರು.

ಅಧ್ಯಾಪಕ ಪಂ.ಪ್ರದ್ಯುಮ್ನಾಚಾರ್ಯ ಪೂಜಾರ ಮಾತನಾಡಿ, ವಾಸಂತಿಯ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಜ್ಞಾನದ ಅರಿವು ಮೂಡಿಸುವ ಅವರ ಕಾರ್ಯ ಸ್ತುತ್ಯಾರ್ಹ ಎಂದರು.

ಗ್ರಾಪಂ ಮಾಜಿ ಅದ್ಯ ಶ್ರೀಮಂತ ಕಾಪಸೆ, ರವೀಂದ್ರ ನಾಯ್ಕೋಡಿ, ಶ್ರೀಗುರು ಹೆಬ್ಬಳ್ಳಿ, ಸಂಜಯ ಜಹಾಗೀರದಾರ, ಅಶೋಕ ಜಹಾಗೀರದಾರ, ನಾರಾಯಣ ಜಹಾಗೀರದಾರ, ಗೋಪಾಲ ಜಹಾಗೀರದಾರ, ಪ್ರಮೋದ ಜಹಾಗೀರದಾರ, ಅಶೋಕ ಕಾಪಸೆ ಸಣ್ಣಪ್ಪ ತಳವಾರ, ಶಂಕರಗೌಡ ಬಿರಾದಾರ, ಜೆ.ಡಿ.ಹೂಗಾರ, ಕಲ್ಲಪ್ಪ ಶಿರಶ್ಯಾಡ, ಮಲ್ಲಕಪ್ಪ ಕಾಪಸೆ, ವಿಶ್ವನಾಥ ಪಾಟೀಲ, ಸಿದ್ದರಾಮ ಡೋಳಿ ಪಾಲ್ಗೊಂಡಿದ್ದರು.