ದೇವರಹಿಪ್ಪರಗಿ : ಅಲ್ಲಮಪ್ರಭು ಅಸಂಖ್ಯಾತ ವಚನಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಶರಣಸಂಗಮ ಸೇವಾ ಸಮಿತಿ ತಾಲೂಕು ಅಧ್ಯ ಸಂಗಪ್ಪ ತಡವಲ್ ಹೇಳಿದರು.
ಪಟ್ಟಣದ ಕರಿದೇವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಅಲ್ಲಮಪ್ರಭು ಜಯಂತಿಯಲ್ಲಿ ಮಾತನಾಡಿದ ಅವರು, ಬಸವಣ್ಣ, ಅಕ್ಕಮಹಾದೇವಿ, ಮಡಿವಾಳ ಮಾಚಿದೇವರ ಸಮಕಾಲೀನವರಾದ ಅಲ್ಲಮಪ್ರಭು ಅನುಭವ ಮಂಟಪ ಶೂನ್ಯ ಸಿಂಹಾಸನದ ಅಧ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಶ್ರೀಶೈಲ ವನದಲ್ಲಿ ಶಿವೈಕ್ಯರಾದರೆಂದು ಹೇಳಲಾಗುತ್ತದೆ. ಇವರ ವಚನ ಚಂದ್ರಿಕೆಯಲ್ಲಿ ಸುಮಾರು ಹನ್ನೆರಡು ನೂರು ವಚನಗಳು ಲಭ್ಯವಾಗಿವೆ ಎಂದು ಅವರ ಜೀವನ, ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಮಲ್ಲು ಹಳಿಮನಿ, ಮಲ್ಲಪ್ಪ ಅಗಸರ, ಅರುಣ ಭದ್ರಗೊಂಡ, ಮುತ್ತು ಹಡಪದ, ಬಸಪ್ಪ ಕುಂಬಾರ, ಹಣಮಂತ ಹಡಗಲಿ, ಅನೀಲ ಜಡಗೊಂಡ, ಶ್ರೀಶೈಲ ಮಂಗಳೂರ, ಕಿರಣ ವಂದಾಲ, ರಾು ಭಾವಿಮನಿ, ಗಣೇಶ ಮಿಂಚನಾಳ, ಸುಂದ್ರಾಬಾಯಿ ಮನಗೂಳಿ ಇದ್ದರು.