ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳದಲ್ಲಿ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಊರಿನ ಹಿರಿಯರು, ದೆವದವರು ಪಾಲ್ಗೊಂಡಿದ್ದರು. 
ಜಿಲ್ಲೆ

ಹಿರೇಮುರಾಳದಲ್ಲಿ ಪಲ್ಲಕಿ ಉತ್ಸವ

Vijayapura - Desk - Shamarao Kulkarni

ಮುದ್ದೇಬಿಹಾಳ: ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ಶಿವಶರಣ ಶ್ರೀ ಚಂದ್ರಾಮೇಶ್ವರರ ಜಾತ್ರಾ ಮಹೋತ್ಸವ ಎರಡು ದಿನ ಶ್ರದ್ಧಾಭಕ್ತಿಯಿಂದ ನೆರವೇರಿತು. ಜಾತ್ರೆಯ ಎರಡನೇ ದಿನವಾದ ಭಾನುವಾರ ಸಂಜೆ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವಣದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿದ ಪಲ್ಲಕ್ಕಿ ಭಕ್ತರಿಗೆ ದರ್ಶನ ನೀಡಿ ನಂತರ ದೇವಸ್ಥಾನದತ್ತ ನಿರ್ಗಮಿಸಿತು. ಸಂಜೆ ಕಲಶವನ್ನು ಶಿಖರಕ್ಕೇರಿಸಲಾಯಿತು. ಜಾತ್ರೆ ಅಂಗವಾಗಿ ಶನಿವಾರ ರಾತ್ರಿ ಶಿವಭಜನೆ ನಡೆದವು.