ನ್ಯಾಯಾಲಯದ ಆದೇಶದನ್ವಯ ಕೊಲ್ಹಾರ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಅತಿಕ್ರಮಣಗೊಂಡಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಳವನ್ನು ಅಧಿಕಾರಿಗಳು ವಶಪಡಿಸಿಕೊಂಡರು. 
ಜಿಲ್ಲೆ

ಆಕ್ರಮಿತ ಕಟ್ಟಡ ತೆರವುಗೊಳಿಸಿದ ಅಧಿಕಾರಿಗಳು

Vijayapura - Desk - Shamarao Kulkarni

ಕೊಲ್ಹಾರ : ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಸ್ಥಳವನ್ನು ಆಕ್ರಮಿಸಿಕೊಂಡು ಕಟ್ಟಡ ನಿರ್ಮಿಸಿಕೊಂಡಿದ್ದನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಶ್ರೀನಿವಾಸ ನೇತೃತ್ವದಲಿ ್ಲಗುರುವಾರ ವಶ ಪಡಿಸಿಕೊಳ್ಳಲಾಯಿತು.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿದ ಜಾಗವನ್ನು ತಮ್ಮದು ಎಂದು ಅಲ್ಲಾಭ ಬಿಜಾಪುರ ಎಂಬುವವರು 2016ರಲ್ಲಿ ಬಸವನ ಬಾಗೇವಾಡಿ ಜೆ.ಎಂ.ಎ್​.ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 25 ಮಾರ್ಚ್​ 2025 ರಂದು ನ್ಯಾಯಾಲಯವು ಅವರು ಸಲ್ಲಿಸಿದ ಅರ್ಜಿ ವಜಾಗೊಳಿಸಿ ಎಪಿಎಂಸಿ ಪರವಾಗಿ ಆದೇಶ ಹೊರಡಿಸಿದೆ.

ನ್ಯಾಯಾಲಯದ ಆದೇಶದಂತೆ ಎಪಿಎಂಸಿ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಶ್ರೀನಿವಾಸ ತಿಳಿಸಿದರು.

ನ್ಯಾಯಾಲಯದ ಆದೇಶದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಜಾಗವನ್ನು ವಶಪಡಿಸಿಕೊಳ್ಳುವಾಗ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಅಲ್ಲಾಭ ಬಿಜಾಪುರ ಹಾಗೂ ಕುಟುಂಬಸ್ಥರು ಪೊಲೀಸರೊಂದಿಗೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.