ದೇವರ ಹಿಪ್ಪರಗಿ: ಮಡಿವಾಳ ಮಾಚಿದೇವರ ರಥೋತ್ಸವ ಹಾಗೂ ಪಲ್ಲಕ್ಕಿ ಮಹೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.
ಪಟ್ಟಣದಲ್ಲಿ ಮಾಚಿದೇವರ ರಥೋತ್ಸವದ ನಿಮಿತ್ತ ಗದ್ದುಗೆಮಠದಲ್ಲಿ ಮಡಿವಾಳೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹೋಮ ಜರುಗಿತು. ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಗದ್ದುಗೆಮಠದಿಂದ ಹೊರಟು ಬಜಾರ್ದಲ್ಲಿರುವ ತೇರಿನವರೆಗೆ ಸಾಗಿತು.ಭಕ್ತ ಸಮೂಹ ಉತ್ಸಾಹದಿಂದ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.