ಬಸವನಬಾಗೇವಾಡಿಯ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ವಚನ ದರ್ಶನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.ಶಿವಕುಮಾರ ಶ್ರೀಗಳು,ಚನ್ನಬಸವ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಎಲ್ಲರೂ ದಾಸೋಹ ಮಹತ್ವ ಅರಿಯಲಿ

Vijayapura - Desk - Shamarao Kulkarni

ಬಸವನಬಾಗೇವಾಡಿ: ಪ್ರತಿಯೊಬ್ಬರೂ ಲಿಂಗಪೂಜೆ, ದಾಸೋಹದ ಮಹತ್ವ ತಿಳಿದುಕೊಳ್ಳಬೇಕು ಎಂದು ಇಂಗಳೇಶ್ವರ ವಚನಶಿಲಾ ಮಂಟಪದ ಹಿರಿಯ ಚನ್ನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಬಸವಜಯಂತಿ ನಿಮಿತ್ತ ಮಠದ ವತಿಯಿಂದ ಹಮ್ಮಿಕೊಂಡಿದ್ದ ವಚನ ದರ್ಶನ ಪ್ರವಚನ ಪ್ರಾರಂಭೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಇಂದು ಮಕ್ಕಳಲ್ಲಿ ಸಂಸ್ಕಾರ, ಸಂಸತಿ , ಧಾರ್ಮಿಕತೆ ಕಡಿಮೆಯಾಗುತ್ತಿದೆ. ಪಾಲಕರು ಮಕ್ಕಳ ಕೈಗೆ ಮೊಬೈಲ್​ ಕೊಡಬಾರದು ಎಂದು ಸಲಹೆ ನೀಡಿದರು.

ಪ್ರವಚನಕಾರ ಬಳೂಟಗಿಯ ಶಿವಕುಮಾರ ಶ್ರೀಗಳು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಮೇಲು ಕೀಳು ಹೋಗಲಾಡಿಸಲು ಶ್ರಮಿಸಿದರು. ಶರಣರು ಸಂಸ್ಕಾರವಂತರಾಗಿ ಅನುಭವ ಮಂಟಪ ಕಟ್ಟಿದರು. ಇಲ್ಲಿನ ಸಿದ್ಧಲಿಂಗ ಶೀಗಳು ಮಕ್ಕಳಿಗೆ ಸಂಸ್ಕಾರ ಶಿಬಿರ ಆರಂಭಿಸುವ ಮೂಲಕ ಮಕ್ಕಳಲ್ಲಿ ನೈತಿಕ, ಆಧ್ಯಾತ್ಮಿಕ ಮೌಲ್ಯ ತಿಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾನೀಯ ಎಂದರು.

ಪುರಸಭೆ ಅಧ್ಯೆ ಜಗದೇವಿ ಗುಂಡಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯ ಶಿವನಗೌಡ ಬಿರಾದಾರ, ಮುಖಂಡ ಬಿ.ಕೆ.ಕಲ್ಲೂರ, ನಿವೃತ್ತ ಪ್ರಾಧ್ಯಾಪಕ ಪಿ.ಎಲ್​.ಹಿರೇಮಠ, ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಬ್ಲಾಕ್​ ಕಾಂಗ್ರೆಸ್​ ಅಧ್ಯ ಸುರೇಶ ಹಾರಿವಾಳ, ಬಸವರಾಜ ಗೊಳಸಂಗಿ, ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಶೇಖರಗೌಡ ಪಾಟೀಲ, ವಿನೂತ ಕಲ್ಲೂರ, ಎಚ್​.ಬಿ.ಬಾರಿಕಾಯಿ, ಕೊಟ್ರೇಶ ಹೆಗಡ್ಯಾಳ, ಸಂಗಮೇಶ ಹೂಗಾರ, ಪಂಚಾರಿ ಹೂಗಾರ ಉಪಸ್ಥಿತರಿದ್ದರು,