ಆಲಮೇಲ ತಾಲೂಕಿನ ಮಲಘಾಣದಲ್ಲಿ ಜಡೆ ಶಾಂತಲಿಂಗ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಪುರಾಣ ಮಂಗಲೋತ್ಸವ ಕಾರ್ಯಕ್ರಮವನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು. ಶಾಸಕ ರಮೇಶ ಭೂಸನೂರ, ಶ್ರೀಶೈಲಯ್ಯ ಸ್ವಾಮಿ, ಪ್ರವಿಣಕುಮಾರ ಸ್ವಾಮೀಜಿ, ಗುರುಲಿಂಗಯ್ಯ ರುದ್ರಯ್ಯ ಹಿರೇಮಠ ಇದ್ದರು. 
ಜಿಲ್ಲೆ

ಜಡೆ ಶಾಂತಲಿಂಗ ಅಡ್ಡಪಲ್ಲಕ್ಕಿ ಉತ್ಸವ

Vijayapura - Desk - Shamarao Kulkarni

ನಾಲತವಾಡ: ಜಾತ್ರೆ, ಉತ್ಸವಗಳು ಮಾನವರ ಸಂಬಂಧ ಗಟ್ಟಿಗೊಳಿಸುತ್ತವೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು.

ಆಲಮೇಲ ತಾಲೂಕಿನ ಮಲಘಾಣದ ಜಡೆ ಶಾಂತಲಿಂಗೇಶ್ವರ ಜಾತ್ರೆ ನಿಮಿತ್ತ ನಡೆದ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಜಡೆ ಶಾಂತಲಿಂಗ ಶ್ರೀಗಳಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಮಲಘಾಣ ಗ್ರಾಮ ಜಾತ್ಯತಿತ, ಧರ್ಮಾತೀತವಾಗಿದ್ದು, ಈ ಗ್ರಾಮದಲ್ಲಿ ಯಾವುದೇ ತಾರತಮ್ಯ ಇಲ್ಲದಂತೆ ಒಗ್ಗಟ್ಟಾಗಿ ಜನರು ಧರ್ಮ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದರು.

ಮಾಜಿ ಶಾಸಕ ರಮೇಶ ಭೂಸನೂರ ಅಧ್ಯೆ ವಹಿಸಿದ್ದರು.

ಶ್ರೀಶೈಯಯ್ಯ ಸ್ವಾಮಿ, ಪ್ರವಿಣಕುಮಾರ ಸ್ವಾಮೀಜಿ, ಗುರುಲಿಂಗಯ್ಯ ರುದ್ರಯ್ಯ ಹಿರೇಮಠ, ಯಶವಂತರಾಯಗೌಡ ರೂಗಿ ಉಪಸ್ಥಿತರಿದ್ದರು.