ನೀವರಗಿಯಲ್ಲಿ ದೇವಿ ಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕುಂಭಹೊತ್ತ ಮಹಿಳೆಯರು. 
ಜಿಲ್ಲೆ

ದೇವಿ ಮೂರ್ತಿ ಪ್ರತಿಷ್ಠಾಪನೆ

Vijayapura - Desk - Shamarao Kulkarni

ರೇವತಗಾಂವ: ಸಮೀಪದ ನಿವರಗಿ ಗ್ರಾಮದಲ್ಲಿ ಶ್ರೀ ದೇವಿ ಮೂರ್ತಿ ಪ್ರತಿಷ್ಠಾಪನೆ ವೈಭವದಿಂದ ನಡೆಯಿತು.

ಶನಿವಾರ ನಿವರಗಿ ಮತ್ತು ಹಾವಿನಾಳ ಗ್ರಾಮದ ಸೀಮೆಯಿಂದ ದೇವಸ್ಥಾನವರೆಗೆ ಮೂರ್ತಿ ಮೆರವಣಿಗೆ ನಡೆಯಿತು. ಸುಮಂಗಲೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಭಾನುವಾರ ನಸುಕಿನ ಜಾವ ದೇವಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ, ಮಹಾರುದ್ರಾಭಿಷೇಕ, ತ್ರಿದಳ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.