ಬಸವನಬಾಗೇವಾಡಿಯಲ್ಲಿ ನಡೆದ ರೌಡಿಶೀಟರ್​ ಪರೇಡ್​ನಲ್ಲಿ ರೌಡಿಗಳಿಗೆ ಡಿವೈಎಸ್​ಪಿ ಬಲ್ಲಪ್ಪ ನಂದಗಾಂವಿ ವಾರ್ನಿಂಗ್​ ನೀಡಿದರು.  
ಜಿಲ್ಲೆ

ರೌಡಿಶೀಟರ್​ಗಳಿಗೆ ಡಿವೈಎಸ್​ಪಿ ವಾರ್ನಿಂಗ್​

Vijayapura - Desk - Shamarao Kulkarni

ಬಸವನಬಾಗೇವಾಡಿ: ಪಟ್ಟಣದ ಪೊಲೀಸ್​ ಠಾಣೆ ಆವರಣದಲ್ಲಿ ಬಸವನಬಾಗೇವಾಡಿ ಉಪವಿಭಾಗದ ರೌಡಿಶೀಟರ್​ಗಳ ಪರೇಡ್​ ನಡೆಯಿತು. ಕೊಲೆ, ದರೋಡೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 58 ಜನ ರೌಡಿಶೀಟರ್​ಗಳು ಪರೇಡ್​ನಲ್ಲಿ ಹಾಜರಿದ್ದರು.

ಡಿವೈಎಸ್​ಪಿ ಬಲ್ಲಪ್ಪ ನಂದಗಾಂವಿ ಮಾತನಾಡಿ, ಸಮಾಜದ ಶಾಂತಿ ಕದಡುವ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕು. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಗಡಿ ಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಸವನಬಾಗೇವಾಡಿ ಪಿಎಸ್​ಐ ಗುರುಶಾಂತ ದಾಶಾಳ, ಮುದ್ದೇಬಿಹಾಳ ಸಿಪಿಐ ಎಂ.ಡಿ.ಶಪೀಯುದ್ದಿನ್​, ಪಿಎಸ್​ಐ ಸಂಜಯ ತಿಪ್ಪಾರೆಡ್ಡಿ, ನಿಡಗುಂದಿ ಸಿಪಿಐ ಅಶೋಕ ಚವ್ಹಾಣ, ಶಿವಾನಂದ ಪಾಟೀಲ, ರಾಮನಗೌಡ ಸಂಕನಾಳ, ಎಂ.ಬಿ. ಬಿರಾದಾರ, ಎಂ.ವಿ. ಕುಲಕರ್ಣಿ, ಯತೀಶ್​.ಕೆ ಎನ್​. ಉಪಸ್ಥಿತರಿದ್ದರು