ಮೊರಟಗಿ: ಅಂಗವಿಕಲರ, ವೃದ್ಧರ, ಅನಾಥರ, ನಿರ್ಗತಿಕರ ಪಾಲಿಗೆ ಧರ್ಮಸ್ಥಳ ಸಂಸ್ಥೆ ನೆರಳಾಗಿ ನಿಂತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯ ಅಶೋಕ ಅಲ್ಲಾಪುರ ಹೇಳಿದರು.
ಮೊರಟಗಿ ವಲಯದ ಯರಗಲ್(ಬಿಕೆ) ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಮಾಸಾಶನ ಲಾನುಭವಿ ಗುರುಬಾಯಿ ಪರಗೊಂಡ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ತಾಲೂಕು ಯೋಜನಾಧಿಕಾರಿ ಕೃಷ್ಣ ಮೂರ್ತಿ, ಬಲವಂತಪ್ಪ ಹೂಗಾರ, ಚಂದ್ರಾಮ ಕರಕಿ, ಚಂದ್ರಕಾಂತ ಹೆರೂರ, ರಾಮಣ್ಣ ಪರಗೊಂಡ, ಗುರುರಾಜ ಪರಗೊಂಡ, ಸಂತೋಷ ಕೋಣಶಿರಸಗಿ, ಶೇಖಯ್ಯ ಹಿರೇಮಠ, ವಲಯದ ಮೇಲ್ವಿಚಾರಕ ರವಿ ಕೆ., ಸಿದ್ದಯ್ಯ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಆಶಾ, ಸೇವಾಪ್ರತಿನಿಧಿ ಬಾಗಮ್ಮ, ಚಂದ್ರಕಲಾ ಹಾಗೂ ಸಂದ ಸದಸ್ಯರು ಇದ್ದರು.