ಮುದ್ದೇಬಿಹಾಳ ತಹಸೀಲ್ದಾರ್​ ಕಚೇರಿ ಆವರಣದಲ್ಲಿ ನೊಂದ ಮಹಿಳೆ ಇಂದ್ರವ್ವ ಚಲವಾದಿ ಅವರೊಂದಿಗೆ ದಲಿತ ಸಂಟನೆಗಳ ಮುಖಂಡರು ಧರಣಿ ನಡೆಸಿದರು. ಪ್ರಕಾಶ ಚಲವಾದಿ, ಪ್ರಶಾಂತ ಕಾಳೆ, ಶೇಖರ ಮಾದರ, ದೇವರಾಜ ಹಂಗರಗಿ ಇನ್ನಿತರರು ಇದ್ದರು.  
ಜಿಲ್ಲೆ

ಕಂದಾಯ ನಿರೀಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ: ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ದಲಿತರಿಗೆ ಅನ್ಯಾಯ ಮಾಡುತ್ತಿರುವ ನಾಲತವಾಡ ಹೋಬಳಿಯ ಕಂದಾಯ ನಿರೀಕ, ಗ್ರಾಮಸೇವಕ ರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ನೊಂದ ಮಹಿಳೆ ನೆರಬೆಂಚಿ ಗ್ರಾಮದ ಇಂದ್ರವ್ವ ಚಲವಾದಿ ಅವರೊಂದಿಗೆ ದಲಿತ ಸಂಟನೆಗಳ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್​ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು

ನೆರಬೆಂಚಿ ಗ್ರಾಮದ ಸರ್ವೇ ನಂಬರ್​ 100ರ ವಾರಸುದಾರರು ಇಂದ್ರವ್ವ ಚಲವಾದಿ ಅವರಿದ್ದಾರೆ. ಇವರು ದಲಿತ ವರ್ಗಕ್ಕೆ ಸೇರಿದವರು. ಇವರ ಜಮೀನಿಗೆ ಸಂಬಂಧಿಸಿದಂತೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ ಇವರಿಬ್ಬರೂ ದಲಿತರನ್ನು ವಂಚಿಸುತ್ತಿದ್ದಾರೆ. ಇಂಥ ಹಲವು ಪ್ರಕರಣಗಳು ತಾಲೂಕಿನಲ್ಲಿ ನಡೆದಿವೆ. ನೊಂದ ಮಹಿಳೆ ಇಂದ್ರವ್ವಳಿಗೆ ಇವರು ಕಿರುಕುಳ ನೀಡುತ್ತಿದ್ದಾರೆ. ತಮ್ಮ ಕರ್ತವ್ಯ ದುರ್ಬಳಕೆ ಮಾಡಿಕೊಂಡು ಅನ್ಯಾಯ ಮಾಡುತ್ತಿದ್ದಾರೆ ಎಂದು ಅಂಬೇಡ್ಕರ್​ ಯುವ ಸೇನೆಯ ತಾಲೂಕು ಅಧ್ಯ ಪ್ರಕಾಶ ಚಲವಾದಿ ಸರೂರ ಆರೋಪಿಸಿದರು.

ಮಾಧ್ಯಮದವರ ಮುಂದೆ ಇಂದ್ರವ್ವ ಗೋಳು ತೋಡಿಕೊಂಡಳು. ಮುಖಂಡರಾದ ಪ್ರಶಾಂತ ಕಾಳೆ, ಶೇಖರ ಮಾದರ, ದೇವರಾಜ ಹಂಗರಗಿ, ರೇವಣಸಿದ್ದ ನಾಯಕ, ಸಿದ್ದಪ್ಪ ಚಲವಾದಿ ಬಿದರಕುಂದಿ, ಆನಂದ ಮುದೂರ, ಆನಂದ ದೇವೂರ ಧರಣಿಯಲ್ಲಿದ್ದರು.