ಮುದ್ದೇಬಿಹಾಳ: ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಬಡ ಪಾಲಕರ ಹತ್ತು ಪ್ರತಿಭಾವಂತ ಮಕ್ಕಳಿಗೆ ಪಿಯುಸಿ ವಿಜ್ಞಾನ ಶಿಣವನ್ನು ಊಟ, ವಸತಿ ಸಹಿತ ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ನಮ್ಮ ಶಿಣ ಸಂಸ್ಥೆಯು ಬಡವರಿಗೂ ಗುಣಮಟ್ಟದ ಶಿಣ ನೀಡುವ ಯೋಜನೆ ರೂಪಿಸಿದೆ ಎಂದು ಅಹಿಲ್ಯಾದೇವಿ ಹೋಳ್ಕರ್ ಗ್ರಾಮೀಣ ಮತ್ತು ಶೈಣಿಕ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.
ಇಲ್ಲಿನ ವಿದ್ಯಾನಗರದಲ್ಲಿರುವ ಅಭ್ಯುದಯ ಸೈನ್ಸ್, ಕಾಮರ್ಸ್ ಪಿಯು ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಅಹಿಲ್ಯಾದೇವಿ ಹೋಳ್ಕರ್ ಅವಾರ್ಡ್&2025 ಸ್ಪರ್ಧಾತ್ಮಕ ಪರೀೆಯಲ್ಲಿ ಉಚಿತ ಶಿಣಕ್ಕೆ ಆಯ್ಕೆಯಾದ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದರು.
500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಳಗ್ಗೆ ನಡೆದ ಪರೀೆಗೆ ಹಾಜರಾಗಿದ್ದರು. ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳನ್ನು ಎರಡು ವರ್ಷಗಳ ಸಂಪೂರ್ಣ ಉಚಿತ ಶಿಣಕ್ಕೆ ಆಯ್ಕೆ ಮಾಡಲಾಯಿತು. 16 ವಿದ್ಯಾರ್ಥಿಗಳನ್ನು ಶೇ.50 ರಿಯಾಯಿತಿ ಶುಲ್ಕಕ್ಕೆ, 23 ವಿದ್ಯಾರ್ಥಿಗಳನ್ನು ಶೇ.40 ರಿಯಾಯಿತಿ ಶುಲ್ಕ ಯೋಜನೆಗೆ ಆಯ್ಕೆ ಮಾಡಲಾಗಿದೆ. ಪರೀೆಗೆ ಹಾಜರಾದ ಎಲ್ಲರಿಗೂ ಶುಲ್ಕದಲ್ಲಿ ಶೇ.20 ರಿಯಾಯಿತಿ ನೀಡಲಾಗುತ್ತದೆ ಎಂದರು.
ಸಂಸ್ಥೆ ಆಡಳಿತಾಧಿಕಾರಿ ಬಿ.ಜಿ.ಬಿರಾದಾರ ಮಾತನಾಡಿ, ಈ ಸಂಸ್ಥೆಯಲ್ಲಿ 1ನೇ ತರಗತಿಯಿಂದ ಪದವಿಯ ಹಂತದವರೆಗೂ ಒಂದೇ ಸೂರಿನಡಿ ಶಿಣ ಒದಗಿಸುವ ಸೌಲಭ್ಯ ನಮ್ಮಲ್ಲಿದೆ. ಈಗಾಗಲೇ ಬಿಎಸ್ಸಿ, ಬಿಕಾಂ ಪದವಿ ಕಾರ್ಯನಿರ್ವಹಿಸುತ್ತಿದ್ದು ಈ ವರ್ಷದಿಂದ ಬಿಎ ಪದವಿಯನ್ನೂ ಪ್ರಾರಂಭಿಸಲಾಗುತ್ತಿದೆ. ನಮ್ಮಲ್ಲಿ ಪ್ರವೇಶ ಪಡೆಯುವ ಮಕ್ಕಳು ಪದವಿ ಪೂರೈಸುವವರೆಗೂ ಬೇರೆ ಕಡೆ ಹೋಗುವ ಅವಶ್ಯಕತೆ ಇರುವುದಿಲ್ಲ. 2025ರ ಮಾರ್ಚ್ನಲ್ಲಿ ನಡೆದ ಪಿಯುಸಿ ಲಿತಾಂಶ ಉತ್ತಮವಾಗಿ ಹೊರಹೊಮ್ಮಿರುವುದು ನಮ್ಮಲ್ಲಿ ದೊರೆಯುವ ಗುಣಮಟ್ಟದ ಶಿಣಕ್ಕೆ ಕನ್ನಡಿ ಹಿಡಿದಂತಿದೆ ಎಂದರು.
ಪರೀೆಯಲ್ಲಿ ಮೊದಲನೇ ರ್ಯಾಂಕ್ ಪಡೆದ ಬಸವನ ಬಾಗೇವಾಡಿ ತಾಲೂಕು ಬ್ಯಾಲ್ಯಾಳ ಗ್ರಾಮದ ಗಾಯತ್ರಿ ಸಜ್ಜನ ಮಾತನಾಡಿ, ಬಡಕುಟುಂಬದ ತನಗೆ ಪಿಯುಸಿ ವಿಜ್ಞಾನ ವಿಷಯದಲ್ಲಿ ಎರಡು ವರ್ಷ ಸಂಪೂರ್ಣ ಉಚಿತ ಶಿಣ ದೊರಕುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದಳು. ಮೂರನೇ ರ್ಯಾಂಕ್ ಪಡೆದ ಡೊಂಕಮಡು ಗ್ರಾಮದ ಸಹನಾ ವಾಗಣಗೇರಿ 7ನೇ ರ್ಯಾಂಕ್ ಪಡೆದ ಅನೀಲ ಮಮದಾಪು ಅನಿಸಿಕೆ ಹಂಚಿಕೊಂಡರು. ಸಂಸ್ಥೆಯ ನಿರ್ದೇಶಕ ಕಿರಣ್ ಮದರಿ, ಸಲಹಾ ಸಮಿತಿ ಸದಸ್ಯ ರವಿ ಜಗಲಿ, ಲೆಕ್ಕ ವ್ಯವಸ್ಥಾಪಕರಾದ ಬಸವರಾಜ ಬಿಜ್ಜೂರ, ಪ್ರಾಚಾರ್ಯರಾದ ಚಂದ್ರು ಧನ್ನೂರ, ಆರ್.ಎಸ್.ಜಡಗಿ,
ಉಪನ್ಯಾಸಕರಾದ ವೀರೇಶ ಹೂಲಿಕೇರಿ, ಪ್ರಶಾಂತ ಬಿರಾದಾರ, ರಂಗಸ್ವಾಮಿ ಎಸ್., ರವಿ ಚಲವಾದಿ, ಪಾಲಕರ ಪ್ರತಿನಿಧಿ ಸಂಗಣ್ಣ ಬಿಸಲದಿನ್ನಿ, ಬಿ.ಬಿ.ಚಿಗರಿ, ಬಸವರಾಜ ಗೂಡಲಮನಿ ಇದ್ದರು.