ಬಸವನಬಾಗೇವಾಡಿ: ತಾಲೂಕಿನ ಮನಗೂಳಿಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಜನರ ಕುಡಿಯುವ ನೀರಿನ ದಾಹ ನೀಗಿಸಲು ಪ್ರಮುಖ ಸ್ಥಳಗಳಲ್ಲಿ ಅರವಟ್ಟಿಗೆ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಮನಗೂಳಿ ಪಟ್ಟಣದ ಬಸ್ ನಿಲ್ದಾಣ, ಗಣಪತಿ ಗುಡಿ, ಉಕ್ಕಲಿ ರಸ್ತೆ, ಪೊಲೀಸ್ ಠಾಣೆ, ಸೋಮೇಶ್ವರ ಭಜನಾಮಂಟಪ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವೃತ್ತ ಸಾರ್ವಜನಿಕರ ಆಸ್ಪತ್ರೆ ಸೇರಿ ಅನೇಕ ಜನದಟ್ಟನೆ ಹಾಗೂ ವಿವಿಧ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಲಾಯಿತು.
ಪಪಂ ಅಧ್ಯ ಡಾ. ಮಳಸಿದ್ದಪ್ಪ ಮೇತ್ರಿ ಮಾತನಾಡಿ, ಈ ವರ್ಷ ಬೇಸಿಗೆ ಬಿಸಿಲು ಹೆಚ್ಚಿರುವುದರಿಂದ ಸಾರ್ವಜನಿಕರ ಅನಕೂಲಕ್ಕಾಗಿ ಪ್ರಮುಖ ಸ್ಥಳಗಳಲ್ಲಿ ಅರವಟ್ಟಿಗೆ ಸ್ಥಾಪಿಸಲಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಕಾಶ ಮನಗೂಳಿ, ಪ್ರದಿಪ್ ಜಾನಕರ, ಭಾಗ್ಯರಾಜ ಸೊನ್ನದ, ರಮೇಶ ಪಿರಾಗಾ, ತಿಪ್ಪಣ್ಣ ಖ್ಯಾತನವರ, ಮುಖ್ಯಾಧಿಕಾರಿ ಶಬ್ಬೀರ್ ರೇವುರಕರ ಉಪಸ್ಥಿತರಿದ್ದರು.