ತಾಳಿಕೋಟೆ: ಶ್ರೀರಾಮಚಂದ್ರನು ರಾಜನಾಗಿದ್ದರೂ ತನ್ನದೇ ಆದ ಆದರ್ಶ ಕೈಬಿಡಲಿಲ್ಲ. ಆ ಸಂಸ್ಕಾರದಿಂದಲೇ ದೇವನಾಗಲು ಸಾಧ್ಯವಾಯಿತು ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ಧ್ದಲಿಂಗ ದೇವರು ಹೇಳಿದರು.
ರಾಮ ನವಮಿ ನಿಮಿತ್ತ ರಾಮ ನವಮಿ ಉತ್ಸವ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಮನ ಮೂರ್ತಿಯ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಶ್ರೀರಾಮನ ಆದರ್ಶ ಪಾಲಿಸಿದಾಗ ರಾಮರಾಜ್ಯ ನಿರ್ಮಾಣವಾಗಲು ಸಾಧ್ಯ ಎಂದರು.
ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಮಾತನಾಡಿ, ರಾಮನವಮಿ ಉತ್ಸವ ನಡೆಯುತ್ತಿರುವುದು ಸಂತಸ ತಂದಿದೆ. ರಾಮ ಮರ್ಯಾದಾ ಪುರುಷೋತ್ತಮನಾಗಿ ಬಾಳಿದ್ದಾನೆ. ನಮಗೆಲ್ಲರಿಗೂ ಆದರ್ಶಪ್ರಾಯವಾಗಿದ್ದಾನೆ ಎಂದರು.
ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಶ ವಿರಕ್ತಮಠ, ಶಿವಭವಾನಿ ಮಂದಿರದ ಅರ್ಚಕ ಸಂತೋಷ ಭಟ್ಟ ಜೋಶಿ, ಭೀಮಾಶಂಕರ ಜೋಶಿ, ಧಶರತ ಸಿಂಗ್ ಮನಗೂಳಿ, ಆರ್.ಎಸ್. ಪಾಟೀಲ, ಎಚ್.ಎಸ್. ಪಾಟೀಲ, ಹರಿಸಿಂಗ್ ಮೂಲಿಮನಿ, ಬಾಬು ಹಜೇರಿ, ಎಸ್.ಬಿ. ಕಟ್ಟಿಮನಿ, ಮಾನಸಿಂಗ್ ಕೊಕಟನೂರ, ಪರಶುರಾಮ ಕಟ್ಟಿಮನಿ, ಸುರೇಶ ಹಜೇರಿ, ಅರುಣ ದಡೇದ, ರತನಸಿಂಗ್ ಕೊಕಟನೂರ, ವಿಶ್ವನಾಥ ಬಿದರಕುಂದಿ, ರಾಮ ನವಮಿ ಉತ್ಸವ ಸಮಿತಿ ಅಮಿತಸಿಂಗ್ ಮನಗೂಳಿ, ಗೋವಿಂದಸಿಂಗ್ ಹಜೇರಿ, ಸುಧೀರ ತಿವಾರಿ, ಗಂಗಾರಾಮಸಿಂಗ್ ಕೊಕಟನೂರ, ರಾಜು ಹಜೇರಿ, ಸಂದೀಪ ಬನಸಿ, ರಾು ಹಜೇರಿ, ವಿಠ್ಠಲಸಿಂಗ್ ಹಜೇರಿ, ನಿತೀನ್ ವಿಜಾಪುರ, ಸುರಜ್ ಹಜೇರಿ ಪಾಲ್ಗೊಂಡಿದ್ದರು.