ನಾಲತವಾಡ: ಯಾವುದೇ ಧರ್ಮವು ಕೇವಲ ಆರಾಧನೆಯನ್ನು ಕಲಿಸಲು ಹುಟ್ಟಿಕೊಂಡಿಲ್ಲ. ಮನುಷ್ಯರನ್ನು ಬೆಸೆಯುವ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾರವನ್ನು ಎಲ್ಲ ಧರ್ಮಗಳು ಸಾರಿವೆ ಎಂದು ಅಸ್ಕಿ ೌಂಡೇಶನ್ ಅಧ್ಯ ಸಿ.ಬಿ.ಅಸ್ಕಿ ಹೇಳಿದರು.
ಜಾಮಿಯಾ ಮಸೀದಿಯಲ್ಲಿ ಅಸ್ಕಿ ೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಇ್ತಾರ್ ಕೂಟದಲ್ಲಿ ಮಾತನಾಡಿದ ಅವರು, ದೇಹ ಹಾಗೂ ಮನಸ್ಸಿನ ಶುದ್ಧಿಯ ಜತೆಗೆ ಸತ್ಯ, ನಿಷ್ಠೆಯಿಂದ ಕಾಯಕದಲ್ಲಿ ತೊಡಗಲು ರಂಜಾನ್ ಹಬ್ಬ ಪ್ರೇರಣೆ ನೀಡುತ್ತದೆ, ಇ್ತಾರ್ ಕೂಟವು ಹಿಂದೂ ಮುಸ್ಲಿಮರ ಸೌಹಾರ್ದತೆಯ ಸಂಕೇತವಾಗಿದೆ. ಹಿಂದು ಹಾಗೂ ಮುಸ್ಲಿಂರು ಒಟ್ಟಾಗಿ ಊಟ ಮಾಡಿದಾಗ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಎಂದರು.
ಅಂಜುಮನ್ ಇಸ್ಲಾಂ ಕಮಿಟಿ ಅಧ್ಯ ಲಾಳೇಮಶಾಕ ಅವಟಿ, ಮೌಲಾಸಾ ರಕ್ಕಸಗಿ, ಮೌಲಾನಾ ಮಹ್ಮದ್ ಗೌಸ್ ಸಿಕ್ಕಲಗಾರ್, ಹುಚ್ಚೇಸಾ ಮೂಲಿಮನಿ, ಮಹೀಬೂಬ ಗೊಳಸಂಗಿ, ಹುಸೇನ್ ಮುಲ್ಲಾ, ರಸೂಲ್ ಸಾಬ್ ಖಾಜಿ, ಉಪಾಧ್ಯ ಬಾಷೇಸಾಬ್ ತೆಗ್ಗಿನಮನಿ, ಹಣಮಂತ ಕುರಿ, ಸಂಗಣ್ಣ ಸಜ್ಜನ, ಅಲ್ಲಾಭ ಕುಳಗೇರಿ, ಮಹಿಬೂಬ ಕುಳಗೇರಿ, ಮೌಲಾನಾ ಇಸ್ಮಾಯಿಲ್ ಮುಲ್ಲಾ, ಯೂನೂಸ್ ಮೂಲಿಮನಿ ಇದ್ದರು.