ಶಂಕರ ಮಠದ ಶ್ರೀಗಳು  
ಜಿಲ್ಲೆ

ಸಿಂದಗಿಗೆ ಶಂಕರ ಮಠದ ಶ್ರೀಗಳು ನಾಳೆ

Vijayapura - Desk - Shamarao Kulkarni

ಸಿಂದಗಿ: ಶೃಂಗೇರಿ ಶಾರದಾಪೀಠ ಶಂಕರ ಮಠದ ಶ್ರೀವಿಧುಶೇಖರಭಾರತಿ ಸ್ವಾಮಿಗಳು ಮಾ.20 ಹಾಗೂ 21ರಂದು ಸಿಂದಗಿಗೆ ಆಗಮಿಸಲಿದ್ದಾರೆ ಎಂದು ಸದ್ಗುರು ಭೀಮಾಶಂಕರ ಸಂಸ್ಥಾನಮಠದ ಪಿಠಾಧೀಶ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಶಾರದಾ ಪೀಠದೊಂದಿಗೆ 800 ವರ್ಷದಿಂದ ಭೀಮಾಶಂಕರ ಮಠದ ಸಂಸತಿ ಬೆಸೆದುಕೊಂಡು ಸಾಗಿದೆ ಎಂದರು.

ಮಾ.20ರಂದು ಸಂಜೆ 5ಕ್ಕೆೆ ಜಗದ್ಗುರುಗಳನ್ನು ವಿಜಯಪುರ ಬೈಪಾಸ್​ ರಸ್ತೆಯಿಂದ ಬೈಕ್​ ರ್ಯಾಲಿ ಮೂಲಕ ಸಂಗಮೇಶ್ವರ ದೇವಸ್ಥಾನಕ್ಕೆ ಕರೆ ತರಲಾಗುವುದು. ಸಂಜೆ 6ಕ್ಕೆ ಸಂಗಮೇಶ್ವರ ದೇವಸ್ಥಾನದಿಂದ ಭೀಮಾಶಂಕರ ಮಠದವರೆಗೆ ಪೂರ್ಣಕುಂಭದೊಂದಿಗೆ ಶೋಭಾಯಾತ್ರೆ ನಡೆಯಲಿದೆ. ರಾತ್ರಿ7ಕ್ಕೆೆ ಜಗದ್ಗುರುಗಳ ಧೂಳಿ ಪೂಜೆ, ಶ್ರೀಗಳಿಂದ ಅನುಗ್ರಹ ಸಂದೇಶ, 8.30ಕ್ಕೆ ಶಾರದಾಚಂದ್ರಮೌಳೇಶ್ವರ ಪೂಜೆ ನಂತರ ಮಠದಲ್ಲಿ ಮಹಾಪ್ರಸಾದ ನೆಯುವುದು ಎಂದು ಹೇಳಿದರು.

ಮಾ.21ರಂದು ಬೆಳಿಗ್ಗೆ 7ಕ್ಕೆ ಸುಂದರಕಾಂಡ ಪಾರಾಯಣ, 10ಕ್ಕೆ ನೂತನ ಸುವರ್ಣ ಭಾರತೀಭವನಕ್ಕೆ ಭೂಮಿ ಪೂಜೆ, ಶೀಲಾನ್ಯಾಸ. 11ಕ್ಕೆೆ ಆಂಜನೇಯ ಮೂಲಮಂತ್ರ ಪಠಣ, ಹೋಮ ಮತ್ತು ಪೂರ್ಣಾಹುತಿ. ಮಧ್ಯಾಹ್ನ 12ಕ್ಕೆ ಸದ್ಗುರು ದತ್ತಪ್ಪ ಸ್ವಾಮಿಗಳವರಿಂದ ಪಾದುಕಾ ಪೂಜೆ ಮತ್ತು ಗೌರವಾರ್ಪಣೆ ನಡೆಯಲಿದೆ. ನಂತರ ಪಟ್ಟಣದ ಅನಂತಲಕ್ಷಿ$್ಮ ಕಲ್ಯಾಣ ಮಂಟಪದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.