ಹೂವಿನಹಿಪ್ಪರಗಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ಹಮ್ಮಿಕೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಕಾರ್ಯಕ್ರಮವನ್ನು ಶಾಸಕ ರಾಜುಗೌಡ ಪಾಟೀಲ ಉದ್ಘಾಟಿಸಿದರು. ಮೃತ್ಯುಂಜಯ ಸ್ವಾಮಿಗಳು, ಆನಂದ ದೇವರು, ಗುರುನಾಥ ಮುರಡಿ, ಶ್ರೀಶೈಲ ಕೌಲಗಿ ಇತರರಿದ್ದರು. 
ಜಿಲ್ಲೆ

ಸಂಗೊಳ್ಳಿ ರಾಯಣ್ಣ ಯುವಕರಿಗೆ ಮಾದರಿ

ಹೂವಿನಹಿಪ್ಪರಗಿ: ದೇಶದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಶಾಂತಿಯುತ ಬದುಕಿಗೆ ಮಾರ್ಗ ತೋರಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರಿಗೆ ಮಾದರಿ ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು.

ತಾಲೂಕಿನ ಕುದರಿ ಸಾಲವಾಡಗಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವದ ಅಧ್ಯತೆ ವಹಿಸಿ ಮಾತನಾಡಿದರು.

ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮೊದಲ ಪುರುಷ ಎಂದು ಖ್ಯಾತಿ ಪಡೆದ ರಾಯಣ್ಣ, ಕಿತ್ತೂರು ರಾಜ್ಯ ಉಳಿಸಿಕೊಳ್ಳಲು ಪ್ರಾಣ ಲೆಕ್ಕಿಸದೆ ಹೋರಾಡಿದ್ದಾರೆ. ರಾಯಣ್ಣನ ಆದರ್ಶವನ್ನು ಪ್ರತಿಯೊಬ್ಬ ಭಾರತೀಯ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಲುಮತ ಮೂಲ ಪೀಠ ಸರೂರದ ಮೃತ್ಯುಂಜಯ ಸ್ವಾಮಿಗಳು ಆಶೀರ್ವಚನ ನೀಡಿ, ಸಂಗೊಳ್ಳಿ ರಾಯಣ್ಣರನ್ನು ಒಂದೇ ಜಾತಿಗೆ ಸೀಮಿತಗೊಳಿಸುವುದು ಸಲ್ಲ. ಸರ್ವ ಜನಾಂಗ ಗೌರವಿಸುವಂತಾಗಬೇಕು ಎಂದರು.

ಜಮಖಂಡಿಯ ಶ್ರೀ ಆನಂದ ದೇವರು, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಗುರುನಾಥ ಮುರಡಿ, ಶ್ರೀಶೈಲ ಕೌಲಗಿ, ರಾಜೇಶ್ವರಿ ಯರನಾಳ, ಸುನೀಲ ಮಾಗಿ ಮಾತನಾಡಿದರು. ದುಂಡಪ್ಪ ಪೂಜಾರಿ, ಸಾಯಿಬಣ್ಣ ಪೂಜಾರಿ ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ಸಚಿನಗೌಡ ಪಾಟೀಲ, ಸಂಗನಗೌಡ ಪಾಟೀಲ, ಗುರುನಗೌಡ ಪಾಟೀಲ, ಅನೀಲಗೌಡ ಪಾಟೀಲ, ಸಂಗನಗೌಡ ಪಾಟೀಲ, ಪ್ರವಿಣಗೌಡ ಪಾಟೀಲ, ಆನಂದ ಸಜ್ಜನ, ಬಸಣ್ಣ ಬಾಗೇವಾಡಿ, ಗುಳಪ್ಪ ಇಂಗಳಗಿ, ಯಲ್ಲಪ್ಪ ಇಂಗಳಗಿ, ಜಟ್ಟೆಪ್ಪ ಇಂಗಳಗಿ, ಬಂದೇನವಾಜ ಕತ್ನಳ್ಳಿ, ಮಾಳಪ್ಪ ಕಡ್ಲಿಮಟ್ಟಿ,

ಯಂಕಪ್ಪ ಗೊಲ್ಲರ, ಮಂಜುನಾಥ ಗುಡಗುಂಟಿ, ಮುತ್ತಪ್ಪ ಇಂಗಳಗಿ, ಪರಸು ಲಗಳಿ, ಮಾಳಪ್ಪ ಇಂಗಳಗಿ, ಗೂಳಪ್ಪ ದೊಡಮನಿ, ಶರಣಪ್ಪ ಸಾತಿಹಾಳ, ಶಂಕ್ರೆಪ್ಪ ಹಂದ್ರಾಳ, ದ್ಯಾಮಣ್ಣ ಲಗಳಿ, ಸಿದ್ದಪ್ಪ ಕಡ್ಲಿಮಟ್ಟಿ, ಸಕ್ರೆಪ್ಪ ಹೂಗಾರ, ಗೂಳಪ್ಪ ಇಂಗಳಗಿ, ಪರಸಪ್ಪ ಜಕ್ಕೆನಾಳ ಉಪಸ್ಥಿತರಿದ್ದರು. ಎಂ.ವಿ. ಅಣ್ಣೆಪ್ಪನವರ ವಂದಿಸಿದರು. ವಿಜಯಕುಮಾರ ದೇಸಾಯಿ ನಿರೂಪಿಸಿದರು.