ಕೊಲ್ಹಾರ: ಆರಾಧ್ಯ ದೇವತೆ ಶ್ರೀ ತೆರಪಿ ಯಲ್ಲಮ್ಮದೇವಿ ಜಾತ್ರೆ ನಿಮಿತ್ತ ಮಂಗಳವಾರ ಸಂಜೆ ಜೋಡೆತ್ತಿನ ಬಂಡಿಗಳಲ್ಲಿ ಹಂದರ ತಪ್ಪಲ ಹಾಗೂ ಶಿವಾನಂದ ನಾಗಪ್ಪ ಅಗಸರ ಕೊಡಮಾಡಿದ 55 ಕೆಜಿ ತೂಕದ ಕಂಚಿನ ಪಲ್ಲಕ್ಕಿ ಮೆರವಣಿಗೆ ಸಡಗರ ಸಂಭ್ರಮದಿಂದ ಜರುಗಿತು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಮೆರವಣಿಗೆ ಬಸವೇಶ್ವರ ವೃತ್ತ, ಗಾಂಧಿವೃತ್ತ, ಅಗಸಿ ಮೂಲಕ ಸಂಗಮೇಶ ವೃತ್ತ್ತ, ಶಿವಾಜಿ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ್ತದ ಮೂಲಕ ದೇವಸ್ಥಾನ ತಲುಪಿತು. ನಂತರ ಭಕ್ತರು ದೇವಿಗೆ ಹಂದರ ತಪ್ಪಲು ಅರ್ಪಿಸಿದರು.
ದೇವಿ ಜಾತ್ರೆಗೆ ಈ ಭಾಗದ ರೈತರು ತಮ್ಮ ಹೊಲಗಳಿಂದ ಜೋಡೆತ್ತಿನ ಬಂಡೆಗಳನ್ನು ಹೂಡಿಕೊಂಡು ಹಂದರ ತಪ್ಪಲ ತರುವುದು ಇಲ್ಲಿನ ವಿಶೇಷ. ಐದು ದಿನ ನಡೆಯುವ ಈ ಜಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ ಅಪಾರ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
ಯಲ್ಲಮ್ಮ ದೇವಿ ಅರ್ಚಕರಾದ ಸಂಗಪ್ಪ ದುಂ ಬಾಟಿ, ಶೇಖಪ್ಪ ಗಾಣಗೆರ, ಬಸಪ್ಪ ಬಾಟಿ, ಮಳೆಪ್ಪ ಬರಗಿ, ಮಲ್ಲಪ್ಪ ಬಾಟಿ, ಈರಪ್ಪ ಚೌದ್ರಿಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.