ಮುದ್ದೇಬಿಹಾಳ ತಾಲೂಕು ಪಂಚಾಯಿತಿ ಕಚೇರಿ ಎದುರು ಯುವ ಜನ ಸೇನೆ ಪದಾಧಿ-ಕಾರಿಗಳು ಧರಣಿ ನಡೆಸಿದ ಸಂದರ್ಭದಲ್ಲಿ ಇಒ ಎನ್​.ಎಸ್​. ಮಸಳಿ ಭೇಟಿ ನೀಡಿ ಬೇಡಿಕೆ ಆಲಿಸಿದರು. ಶಿವಾನಂದ ವಾಲಿ, ಮಹಿಬೂಬ ಕುಳಗೇರಿ, ಸಂಗಯ್ಯ ಸಾರಂಗಮಠ, ಮಲ್ಲು ಬಿಜ್ಜೂರ, ಗಿರಿಯಪ್ಪ ತಳವಾರ ಇದ್ದರು. 
ಜಿಲ್ಲೆ

ತೆರಿಗೆ ವಸೂಲಿ ಮಾಡುವಂತೆ ಆಗ್ರಹಿಸಿ ಧರಣಿ

Vijayapura - Desk - Shamarao Kulkarni

ಮುದ್ದೇಬಿಹಾಳ: ನಾರಾಯಣಪುರ ಜಲಾಶಯದ ಕೃಷ್ಣಾ ನದಿ ಹಿನ್ನೀರು ಬಳಸಿ ವಿದ್ಯುತ್​ ಉತ್ಪಾದಿಸುವ ಮುರ್ಡೇಶ್ವರ ಪವರ್​ ಕಾಪೋರ್ರೇಷನ್​ ಕಂಪನಿಯು ನಾಗಬೇನಾಳ ಗ್ರಾಮ ಪಂಚಾಯಿತಿಗೆ 75 ಲಕ್ಕೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದೆ. ಅದನ್ನು ವಸೂಲಿಮಾಡಿ ಪಂಚಾಯಿತಿ ಅಭಿವೃದ್ಧಿಗೆ ಬಳಸಬೇಕು ಎಂದು ಒತ್ತಾಯಿಸಿ ಯುವಜನ ಸೇನೆಯ ನೇತೃತ್ವದಲ್ಲಿ ವಿವಿಧ ಸಂಟನೆಗಳ ಪದಾಧಿಕಾರಿಗಳು ಮಂಗಳವಾರ ತಾಲೂಕು ಪಂಚಾಯಿತಿ ಕಚೇರಿ ಎದುರು ಅರ್ನಿದಿಷ್ಟಾವ-ಧಿ ಧರಣಿ ಪ್ರಾರಂಭಿಸಿದ್ದಾರೆ.ಸೇನೆ ಅಧ್ಯ ಶಿವಾನಂದ ವಾಲಿ ಮಾತನಾಡಿ, 24 ವರ್ಷಗಳಲ್ಲಿ ಅಂದಾಜು 2&3 ಕೋಟಿ ರೂ. ತೆರಿಗೆ ವಂಚಿಸಲಾಗಿದೆ. 2000 ದಿಂದ 2024ರವರೆಗೆ ಕಂಪನಿಯು ವಿದ್ಯುತ್​ ಉತ್ಪಾದನೆಯ ವಾಣಿಜ್ಯ ತೆರಿಗೆ ಕಟ್ಟಿಲ್ಲ. ಪಿಡಿಒ ಅವರಿಂದ ಜಿಲ್ಲಾಧಿಕಾರಿಯವರೆಗೆ ಪತ್ರ ವ್ಯವಹಾರ ನಡೆಸಿದ್ದರೂ ಸ್ಪಂದಿಸುತ್ತಿಲ್ಲ. ಸರ್ಕಾರಕ್ಕೆ ವಂಚಿಸಿ ನಷ್ಟ ಉಂಟು ಮಾಡಿದ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ತಾ.ಪಂ. ಯೋಜನಾಧಿಕಾರಿ ಖೂಬಾಸಿಂಗ್​ ಜಾಧವ ಇದುವರೆಗೂ ಕೆಕೊಂಡ ಕ್ರಮಗಳ ಮಾಹಿತಿ ನೀಡಿದರು. ತಾಪಂ ಇಒ ಎನ್​.ಎಸ್​. ಮಸಳಿ ಆಗಮಿಸಿ ಬೇಡಿಕೆ ಪರಿಶೀಲಿಸಲು ಕಾಲಾವಕಾಶ ಕೇಳಿದರು. ಇದರಿಂದ ಹೋರಾಟಗಾರರು ಆಕ್ರೋಶಗೊಂಡು ಈ ಕುರಿತು ಅನೇಕ ಬಾರಿ ಪಿಡಿಒ, ಹಿಂದಿನ ತಾಪಂ ಇಒ ಗಮನಕ್ಕೆ ತಂದಿದ್ದನ್ನು ತಿಳಿಸಿ ಹರಿಹಾಯ್ದರು.

ಜಿಪಂ ಸಿಇಒ, ಜಿಲ್ಲಾಧಿಕಾರಿ ಅಥವಾ ತಹಸೀಲ್ದಾರ್​ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ತೆರಿಗೆ ವಂಚನೆ ಕುರಿತು ಕ್ರಮ ಕೆಕೊಳ್ಳುವುದಾಗಿ, ಬಾಕಿ ತೆರಿಗೆ ತುಂಬಿಸಿಕೊಳ್ಳುವುದಾಗಿ ಲಿಖಿತ ಪತ್ರ ನೀಡಿದರೆ ಮಾತ್ರ ಧರಣಿ ಕೆಬಿಡುವುದಾಗಿ ಹೋರಾಟಗಾರರು ಪಟ್ಟು ಹಿಡಿದರು. ಈ ಹಂತದಲ್ಲಿ ಸ್ಪಷ್ಟತೆ ಸಿಗದ ಕಾರಣ ಧರಣಿ ಬುಧವಾರಕ್ಕೂ ಮುಂದುವರಿಸಲು ತೀರ್ಮಾನಿಸಿದರು.

ಸಂಟನೆಗಳ ಪ್ರಮುಖರಾದ ಗಿರಿಯಪ್ಪ ತಳವಾರ, ಮಲ್ಲು ಬಿಜ್ಜೂರ, ರಾಜು ಮಸಿಬಿನಾಳ, ಸಂಗಯ್ಯ ಸಾರಂಗಮಠ, ಶಿವು ವನಕಿಹಾಳ, ರಫೀಕ ತೆಗ್ಗಿನಮನಿ, ಬಾಬು ತಡ್ಲಿಮನಿ, ಗುರು ತಂಗಡಗಿ, ಶಕೀಲ ಅವಟಿ, ರಾಹುಲ್​ ಚಲವಾದಿ, ರಮೇಶ ಚಲವಾದಿ, ಶರಣು ಕಂಬಳಿ, ವೀರೇಶ ವಡ್ಡರ, ಸಂಗಮೇಶ ತಳವಾರ, ಶೇಖಪ್ಪ ಚಲವಾದಿ, ಮಂಜುನಾಥ ತಿಳಗೂಳ, ಶೇಖಸಾ ನದಾ, ಹಣಮಂತ ಗೌಂಡಿ, ಸುರೇಶ ಚಲವಾದಿ, ಮಂಜುನಾಥ ಬಾವಿಕಟ್ಟಿ, ಎಂ.ಎಚ್​. ಚಲವಾದಿ ಇತರರಿದ್ದರು.