ವಿಜಯಪುರ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜತೆ ಕುಟುಂಬಕ್ಕೆ ಬೆಳಕು ನೀಡುವ ಶಕ್ತಿ ಮಹಿಳೆಯರಲ್ಲಿದೆ ಎಂದು ಗಾಯಕಿ ಸೋನು ತಿಳಗೊಳ ಹೇಳಿದರು.
ಮಂಗಳವಾರ ಬಿಡಿಈ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದ್ವೀತಿಯ ಪಿಯು ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಲ್ಯಾವಸ್ಥೆಯಿಂದಲೇ ಅನೇಕ ಸಂಸ್ಕಾರಗಳನ್ನು ತಾಯಿಯಿಂದ ಕಲಿತು ತವರು ಮನೆ, ಗಂಡನ ಮನೆಯನ್ನು ಬೆಳಗುತ್ತಾಳೆ, ಅಷ್ಟೇ ಅಲ್ಲದೇ ತನ್ನ ಮಕ್ಕಳಿಗೂ ಸಂಸ್ಕಾರ ನೀಡುತ್ತಾಳೆ ಎಂದರು.
ಸಂಸ್ಥೆ ಜಂಟಿ ಕಾರ್ಯದರ್ಶಿ ಆರ್.ಪಿ. ಚಿಕ್ಕಲಕಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪಿ.ಟಿ. ಕೊಟ್ನಿಸ್ ಪ್ರಾಸ್ತಾವಿಕ ಮಾತನಾಡಿದರು.
ಪಿಎಚ್ಡಿ ಪದವಿ ಪಡೆದ ಸುಭಾಷ ಕನ್ನೂರ ಹಾಗೂ, ಕೆ&ಸೆಟ್ ಪರೀೆಯಲ್ಲಿ ರಾಜ್ಯಕ್ಕೆ ಒಂಬತ್ತನೇ ಶ್ರೇಣಿಯಲ್ಲಿ ಉತ್ತೀರ್ಣರಾದ ಸುಧೀಂದ್ರ ಕುಲಕರ್ಣಿ, ರಾಷ್ಟ್ರಮಟ್ಟದ ಸೆಕ್ಲಿಂಗ್ ಅಂಡರ್ 19 ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜೇತ ದೀಪಿಕಾ ಪಡತಾರೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆಗೈದ ಛಾಯಾ ನಾಗಶೆಟ್ಟಿ, ಮಹೇಶ್ವರಿ ವಾಲಿಕಾರ, ರಾಗಿಣಿ ಬಗಲಿ, ಶೋಭಿತಾ ಇಬ್ರಾಹಿಂಪುರ ಅವರನ್ನು ಸನ್ಮಾನಿಸಲಾಯಿತು.
ವರ್ಷದ ಆದರ್ಶ ವಿದ್ಯಾರ್ಥಿನಿಯಾಗಿ ಶೋಭಿತಾ ಇಬ್ರಾಹಿಂಪುರ ಅವರನ್ನು ಆಯ್ಕೆ ಮಾಡಲಾಯಿತು.
ಪರ್ವೀನ ಸಾಂಗ್ಲಿಕರ್, ಸುವರ್ಣಾ ವಾಲಿಕಾರ, ಪ್ರೀತಿ ಯಾಳವಾರ, ಉಷಾ ಆಶ್ರೀತ, ಸುಪ್ರಿಯಾ ನಾಯಕ, ಗೀತಾ ಸಲಗರ, ಕಿರಣ ಹರಿದಾಸ, ರಂಜಿತಾ ಹೊನ್ನಪ್ಪಗೋಳ, ಗಿರೀಶ ಕುಲಕರ್ಣಿ, ಸೌರಭ ನಾಮಣ್ಣವರ, ಜಮೀಲಾ ಅಕ್ಕಲಕೋಟ, ಕೃತಿಕಾ ಜತ್ತಿ, ಪದ್ಮಿನಿ ಕುಲಕರ್ಣಿ, ಶಂಕರ ದಡ್ಡಿ ಉಪಸ್ಥಿತರಿದ್ದರು.
ಉಪನ್ಯಾಸಕ ಆರ್.ಎಸ್. ದೀತ ವಾರ್ಷಿಕ ವರದಿ ವಾಚಿಸಿದರು. ರೂತ್ತಮ ಅರ್ಜುಣಗಿ, ಸೀಮಾ ಹೊನವಾಡ ನಿರೂಪಿಸಿದರು. ಸುಜಾತಾ ಚವ್ಹಾಣ ವಂದಿಸಿದರು.