ಆಲಮಟ್ಟಿ ಸಮೀಪದ ಚಿಮ್ಮಲಗಿ ಅರಳಲೆ ಕಟ್ಟಿಮನಿ ಹಿರೇಮಠದಲ್ಲಿ ಲಿಂ.ನೀಲಕಂಠ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ಮತ್ತು ಸಿದ್ಧರೇಣುಕ ಶಿವಾಚಾರ್ಯರ ಪ್ರಥಮ ಅನುಷ್ಠಾನ ನಿಮಿತ್ತ ಪುರಾಣ ಕಾರ್ಯಕ್ರಮದಲ್ಲಿ ಬುತ್ತಿ ಜಾತ್ರೆ ವೈಭವದಿಂದ ನಡೆಯಿತು. 
ಜಿಲ್ಲೆ

ಕೇದಾರ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ನಾಳೆ

ಆಲಮಟ್ಟಿ: ಚಿಮ್ಮಲಗಿ ಭಾಗ&2 ಅರಳಲೆ ಕಟ್ಟಿಮನಿ ಹಿರೇಮಠದಲ್ಲಿ ಲಿಂ. ನೀಲಕಂಠ ಶಿವಾಚಾರ್ಯರ ದ್ವೀತಿಯ ಪುಣ್ಯಸ್ಮರಣೆ, ಸಿದ್ಧರೇಣುಕ ಶಿವಾಚಾರ್ಯರ ಪ್ರಥಮ ಅನುಷ್ಠಾನ ಮಂಗಲೋತ್ಸವ ನಿಮಿತ್ತ ೆ.1ರಂದು ಕೇದಾರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು ತಿಳಿಸಿದರು.\

ಚಿಮ್ಮಲಗಿ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಜ.31ರಂದು ಬೆಳಗ್ಗೆ ಅಯ್ಯಾಚಾರ ದೀೆ, 8ಕ್ಕೆ ನಿಡಗುಂದಿಯ ರುದ್ರಮುನಿ ಶ್ರೀಗಳಿಂದ ಪಂಚಾಚಾರ್ಯ ಧ್ವಜಾರೋಹಣ, ಸಂಜೆ 6ಕ್ಕೆ ಪುರಾಣ ಮಂಗಲ ಮತ್ತು ಮುತೆದೆಯರ ಉಡಿ ತುಂಬುವ ಕಾರ್ಯಕ್ರಮ, ಧರ್ಮ ಸಮಾರಂಭ ನಡೆಯಲಿದೆ.

ಡೋಣೂರಿನ ಡಾ. ಸಿದ್ಧಲಿಂಗ ಶ್ರಿಗಳು, ಬೆಂಗಳೂರಿನ ಡಾ. ಮಹಾಂತಲಿಂಗ ಶ್ರೀ ಸಾನ್ನಿಧ್ಯ ವಹಿಸುವರು. ಭಾಗ್ಯಶ್ರೀ ಶಿವಾನಂದ ಪಾಟೀಲ ಅಧ್ಯತೆ ವಹಿಸುವರು. ಬಾಗಲಕೋಟೆ ಜಿಪಂ ಮಾಜಿ ಅಧ್ಯೆ ವೀಣಾ ಕಾಶಪ್ಪನವರ, ಗೀತಾ ಅಶೋಕ ವಾರದ ಉದ್ಘಾಟಿಸುವರು. ಮುತ್ತಗಿಯ ವೀರರುದ್ರಮುನಿ ಶ್ರೀ, ಜೈನಾಪುರದ ರೇಣುಕ ಶ್ರೀ, ಉಪದೇಶಾಮೃತ ನೀಡುವರು. ಹಿರೂರಿನ ಜಯಸಿದ್ಧೇಶ್ವರ ಶ್ರೀ, ಬಾಡಗಂಡಿಯ ಬಸಮ್ಮತಾಯಿ ಸಮ್ಮುಖ ವಹಿಸುವರು. ನಾಗರತ್ನಾ ಅಶೋಕ ಮನಗೂಳಿ, ಕಸ್ತೂರಿಬಾಯಿ ಸಂಗಣ್ಣ ಬೆಳ್ಳುಬ್ಬಿ, ಕವಿತಾ ಅಪ್ಪುಗೌಡ ಪಾಟೀಲ ಉಪಸ್ಥಿತರಿರುವರು ಎಂದು ಹೇಳಿದರು.

1ರಂದು ಬೆಳಗ್ಗೆ ಅಭಿಷೇಕ, ಹೋಮ ಹವನ, 8ಕ್ಕೆ ನಾನಾ ಮಠಾಧೀಶರ ಪಾದ ಪೂಜೆಯೊಂದಿಗೆ ಮಂಟಪ ಪೂಜೆ, 9.30ಕ್ಕೆ ಕೇದಾರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. 11.30ಕ್ಕೆ ಸಾಮೂಹಿಕ ವಿವಾಹ ನಡೆಯಲಿದ್ದು, ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜಾಲಹಳ್ಳಿಯ ವಿದ್ಯಮಾನ್ಯ ಶಿವಾಭಿನವ ಜಯಶಾಂತಲಿಂಗ ಶ್ರಿಗಳು ಅಧ್ಯತೆ ವಹಿಸುವರು. ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು.

ಮ್ಮಲಗಿ ಮಠದ ಸಿದ್ಧರೇಣುಕ ಶಿವಾಚಾರ್ಯರು ನೇತೃತ್ವ ವಹಿಸುವರು. ವಿವಿಧ ಮಠಾಧೀಶರು ಉಪಸ್ಥಿತರಿರುವರು. ಶಾಸಕ ರಾಜುಗೌಡ ಪಾಟೀಲ, ಮಾಜಿ ಸಚಿವ ಎಸ್​.ಆರ್​.ಪಾಟೀಲ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್​.ಕೆ.ಬೆಳ್ಳುಬ್ಬಿ, ಸೋಮನಗೌಡ ಪಾಟೀಲ ಸಾಸನೂರ, ಸೋಮನಗೌಡ ಪಾಟೀಲ ಮನಗೂಳಿ, ಐ.ಸಿ.ಪಟ್ಟಣಶೆಟ್ಟಿ, ಶರಣಪ್ಪ ವಾರದ, ಡಾ. ವಿಜಯಕುಮಾರ್​ ವಾರದ ಪಾಲ್ಗೊಳ್ಳುವರು ಎಂದು ತಿಳಿಸಿದರು.