ಲೋಕಾಪುರ ಎಪಿಎಂಸಿ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು. ಡಾ. ಸಂತೋಷ ಶೆಟ್ಟರ, ಮಾರುತಿ ರಂಗಣ್ಣವರ, ಗೋವಿಂದ ಕೌಲಗಿ, ಗಿರೀಶ ಹುಕುಮನವರ, ಗೋಪಾಲ ಪೂಜಾರ, ಗಿರೀಶ ಹುಕುಮನವರ ಮತ್ತಿತರರಿದ್ದಾರೆ. 
ಜಿಲ್ಲೆ

ಸಮಾಜದ ತಪ್ಪು ತಿದ್ದಿದ ನಿಷ್ಠುರ

ವಿನಯ ಆಶೋಕ ನಾಯ್ಕ

ಲೋಕಾಪುರ: ಸಮಾಜದ ತಪ್ಪುಗಳನ್ನು ಅತ್ಯಂತ ಧೈರ್ಯವಾಗಿ ಹಾಗೂ ಸಮರ್ಥವಾಗಿ ತಿಳಿಸಿದ ಮೊದಲ ವಚನಕಾರ ಅಂಬಿಗರ ಚೌಡಯ್ಯ ಎಂದು ಡಾ. ಸಂತೋಷ ಶೆಟ್ಟರ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಅವರು ಅನುಭವ ಮಂಟಪದಲ್ಲಿ ಶರಣರನ್ನೊಳಗೊಂಡ ಯಾರ ಮುಲಾಜಿಗೂ ಒಳಗಾಗದೆ ತಮ್ಮ ಅಭಿಪ್ರಾಯವನ್ನು ನೇರವಾಗಿ, ನಿರ್ಭಯವಾಗಿ ವ್ಯಕ್ತಪಡಿಸುತ್ತಿದ್ದರು ಎಂದರು.

ಲೋಕಾಪುರ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಚುಳಕಿ ಮಾತನಾಡಿ, ಸಮಾಜದಲ್ಲಿನ ಡಾಂಭಿಕ ಜೀವನ, ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ನೇರವಾಗಿ ಖಂಡಿಸಿ ವಚನಗಳ ಮೂಲಕ ಸತ್ಯದರ್ಶನ ಮಾಡಿಸಿದ ಅಂಬಿಗರ ಚೌಡಯ್ಯ ನಿಷ್ಠುರವಾದಿ ಶರಣರಾಗಿದ್ದರು ಎಂದರು.

ಅಂಬಿಗೌರ ಚೌಡಯ್ಯ ಸಂಘದ ಉಪಾಧ್ಯಕ್ಷ ವೆಂಕಣ್ಣ ಹುಕುಮನವರ ಮಾತನಾಡಿ, ಗಂಗಾಮತಸ್ಥರು ಸಮಾಜ ಸುಸಂಸ್ಕೃತ ಸಮಾಜ. ನಾವು ಹಿಂದುಳಿದಿದ್ದೇವೆ ಎನ್ನುವ ಭ್ರಮೆಯಿಂದ ಸಮಾಜದ ಜನರು ಹೊರಬರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.

ಅರುಣ ನರಗುಂದ, ಮಹೇಶ ಹುಗ್ಗಿ, ರಂಗನಾಥ ಚಿಪ್ಪಲಕಟ್ಟಿ, ಗೋವಿಂದ ಕೌಲಗಿ, ಶಂಕರ ಪೂಜಾರ, ಕೀರ್ತಿ ಪ್ರಕಾಶ ಹುದ್ದಾರ, ಮಾರುತಿ ರಂಗಣ್ಣವರ, ಮಲ್ಲಪ್ಪ ಗೋಣಿ, ಗಿರೀಶ ಹುಕುಮನವರ, ಗೋಪಾಲ ಪೂಜಾರ, ಮಾಂತೇಶ ಕೋಲಕಾರ, ಉಮೇಶ ಕಾಗಿ, ಶ್ರೀಕಾಂತ ಅಮೋಜಿ ಅರಳಿಕಟ್ಟಿ, ಲೋಕಾಪುರ ಅಂಬಿಗರ ಚೌಡಯ್ಯ ಮತ್ತಿತರರಿದ್ದರು.