ಆಲಮೇಲದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬ್ರಿಗೇಡ್​ ಪೂರ್ವಭಾವಿ ಸಭೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ಉದ್ಘಾಟಿಸಿದರು. ಡಾ. ಸಂದೀಪ ಪಾಟೀಲ, ಶ್ರಿಶೈಲಯ್ಯ ಅಳೊಳ್ಳಿಮಠ, ರಮೇಶ ಬಂಟನೂರ ಇತರರಿದ್ದರು. 
ಜಿಲ್ಲೆ

ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕರ ಕೊರತೆ

ಆಲಮೇಲ: ರಾಜ್ಯ ಬಿಜೆಪಿ ಸಮರ್ಥ ನಾಯಕರ ಕೊರತೆ ಎದುರಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಆರೋಪಿಸಿದರು.

ಬಸವನಬಾಗೇವಾಡಿಯಲ್ಲಿ ನಡೆಯಲ್ಲಿರುವ ಬೃಹತ್​ ಸಮಾವೇಶದ ನಿಮಿತ್ತ ಪಟ್ಟಣದ ಅಳ್ಳೋಳ್ಳಿಮಠದಲ್ಲಿ ಕ್ರಾಂತಿವೀರ ರಾಯಣ್ಣ ಬ್ರಿಗೇಡ್​ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.\

ರಾಜ್ಯದಲ್ಲಿ ಗೋವುಗಳಿಗೆ ಹಿಂಸೆ ನೀಡುವುದು, ಬಾಣಂತಿಯರ ಸರಣಿ ಸಾವು ನಡೆದರೂ ವಿರೋಧ ಪದ ಸ್ಥಾನದಲ್ಲಿರುವ ಬಿಜೆಪಿ ಮುಖಂಡರು ಪ್ರಭಲವಾಗಿ ವಿರೋಧಿಸುತ್ತಿಲ್ಲ. ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕರ ಕೊರತೆ ಎದ್ದುಕಾಣುತ್ತಿದೆ ಎಂದರು.

ಹೀಗಾಗಿ ಹಿಂದುಳಿದ ಸಮಾಜಗಳನ್ನ್ನು ಈ ಸಮಾವೇಶದ ಮೂಲಕ ಒಂದೇ ವೇದಿಕೆಗೆ ತರುವ ಕೆಲಸ ಬ್ರಿಗೇಡ್​ ಮೂಲಕ ಮಾಡಲಾಗುತ್ತಿದೆ ಎಂದರು.

ತಾಲೂಕು ಕುರುಬ ಸಮಾಜದ ಅಧ್ಯ ರಮೇಶ ಬಂಟನೂರ ಮಾತನಾಡಿ, ಜಿಲ್ಲೆಯಲ್ಲಿ ಹಿಂದುಳಿದ ಸಮಾಜವು ಅಧಿಕಾರದಿಂದ ವಂಚಿತವಾಗಿದೆ. ದಣ ಕರ್ನಾಟಕದವರಾದ ತಾವು ಮತ್ತು ಸಿದ್ಧರಾಮಯ್ಯ ನವರು ಈ ಭಾಗದ ಸಮಾಜದ ಸಮಸ್ಯೆ ಬಗ್ಗೆ ಗಮನ ನೀಡುತ್ತಿಲ್ಲ ಎಂದು ಹೇಳಿದರು.

ಡಾ.ಸಂದೀಪ ಪಾಟೀಲ, ಶ್ರಿಶೈಲಯ್ಯ ಅಳೊಳ್ಳಿಮಠ, ಸಿದ್ದು ಬುಳ್ಳಾ, ರವಿ ನಾಯ್ಕೊಡಿ, ಅಶೋಕ ಒಡೆಯರ, ಭೀಮಣ್ಣ ಸೀತಿಮನಿ ನಿಂಗರಾಜ ಬಂಟನೂರ, ಸಿಂಧೂರ ಕಟ್ಟಿಮನಿ, ರಾಕೇಶ ಕಟ್ಟಿಮನಿ ರವಿ ಚೌಡಿಹಾಳ ಇದ್ದರು.