ಗುಳೇದಗುಡ್ಡದ ಪಟ್ಟಣದ ಬಸ್ ನಿಲ್ದಾಣದಲ್ಲಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ ದಿನಾಚರಣೆ ಜರುಗಿತು. ವಿದ್ಯಾ ನಾಯಕ, ಬಿ.ಸಿ. ಕರಡಿ, ಎಸ್.ಎಂ. ಬಾಗವಾನ, ಎನ್.ಯು. ಮಾಗಿ, ಎ.ಎಸ್. ಕುಂಬಾರ, ಎಂ.ಡಿ. ಕಂದಗಲ್ಲ, ಎಚ್.ಜೆ. ದಾಸರ, ಬಿ.ಎಚ್. ಬಜನ್ನವರ ಮತ್ತಿತರರಿದ್ದಾರೆ. 
ಜಿಲ್ಲೆ

ಚಾಲಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಲಿ

ವಿನಯ ಆಶೋಕ ನಾಯ್ಕ

ಗುಳೇದಗುಡ್ಡ: ಚಾಲಕರು ತುರ್ತು ಪರಿಸ್ಥಿಯಲ್ಲೂ ತಮ್ಮ ಕುಟುಂಬದ ರಕ್ಷಣೆ ನೋಡದೇ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ. ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಗುಳೇದಗುಡ್ಡ ಬಸ್ ಡಿಪೋ ಮ್ಯಾನೇಜರ್ ವಿದ್ಯಾ ನಾಯಕ ಹೇಳಿದರು.

ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಹಬ್ಬ, ಉತ್ಸವ ಬಂದರೂ ರಜೆ ಇಲ್ಲದೆ, ತಮ್ಮ ನೋವುಗಳನ್ನು ಬದಿಗೊತ್ತಿ ಪ್ರತಿದಿನ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಆದ್ದರಿಂದ ಅವರು ತಮ್ಮ ಅರೋಗ್ಯದ ಬಗ್ಗೆಯೂ ಕಾಳಜಿ ವಹಿಸಿಕೊಳ್ಳಬೇಕು ಎಂದರು.

ಸಾರಿಗೆ ಸಂಸ್ಥೆಯ ಬಿ.ಸಿ. ಕರಡಿ, ಎಸ್.ಎಂ. ಬಾಗವಾನ, ಎನ್.ಯು. ಮಾಗಿ, ಎ.ಎಸ್. ಕುಂಬಾರ, ಎಂ.ಡಿ. ಕಂದಗಲ್ಲ, ಎಚ್.ಜೆ. ದಾಸರ, ಬಿ.ಎಚ್. ಬಜನ್ನವರ, ಎನ್.ಎ. ಸಿಲೆದಾರ, ಎಸ್.ವಿ. ಸುಂಕದ, ಎನ್.ಎಸ್. ಭುಪರದ, ಕೆ.ಡಿ. ಕುಂಬಾರ, ಮಹೇಶ ಗೌಡರ, ಟಿ.ಎನ್. ಭೈರಮಟ್ಟಿ, ಎಚ್.ಎಸ್. ಮಾಲಿಪಾಟೀಲ, ಕೆ.ಎಚ್. ಜಾಡರ, ಟಿ.ಎನ್. ಪೇರಮಟ್ಟಿ ಮತ್ತಿತರರಿದ್ದರು.