ನಾಲತವಾಡ ಸಮೀಪದ ಆಲೂರ ಗ್ರಾಮದಲ್ಲಿ ಗ್ರಾಮ ದರ್ಶನ ಪ್ರವಚನದಲ್ಲಿ ಮಾತನಾಡಿದ ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು. 
ಜಿಲ್ಲೆ

ಸರ್ವರಿಗೂ ಒಳಿತು ಬಯಸುವುದೇ ಧರ್ಮ

Vijayapura - Desk - Shamarao Kulkarni

ನಾಲತವಾಡ : ಸರ್ವರಿಗೂ ಒಳಿತು ಬಯಸುವುದೇ ನಿಜವಾದ ಧರ್ಮ ಎಂದು ಬಾಲೆಹೊಸೂರ ಶಿರಹಟ್ಟಿ ಭಾವೈಕ್ಯ ಪೀಠ ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಆಲೂರ ಗ್ರಾಮದಲ್ಲಿ ನಿತ್ಯ ಗ್ರಾಮ ದರ್ಶನ ಪ್ರವಚನದಲ್ಲಿ ಮಾತನಾಡಿದ ಅವರು, ದೇವರೊಬ್ಬನೆ ನಾಮ ಹಲವು, ದೇವರು ನಮ್ಮೊಳಗೂ ಇದ್ದಾನೆ. ಪ್ರತಿ ಹಳ್ಳಿಯಲ್ಲಿರುವ ಮಾರುತಿ ದೇವಸ್ಥಾನಗಳು ವೈಚಾರಿಕ, ವೈಜ್ಞಾನಿಕ ಹಾಗೂ ಸಹೋದರತೆ ಭಾವನೆ ಬಿತ್ತುವ ತಾಣಗಳಾಗಿವೆ ಎಂದರು.

ಕೊಡೇಕಲ್​ ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಮಹಾಸ್ವಾಮೀಜಿ, ಲೊಟಗೇರಿಯ ಡಾ. ಗುರುಮೂರ್ತಿ ಕಣಕಾಲಮಠ, ಬೀಳಗಿಯ ಸಂಗನಬಸವ ದೇವರು, ನವಲಗುಂದದ ವೀರಬಸವ ದೇವರು ಇದ್ದರು.