ಮೈಸೂರು: ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್‌ನ (ಐಎಸ್‌ಸಿಎ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಐಎಸ್‌ಸಿಎ ನೀಡುವ ಪ್ರತಿಷ್ಠಿತ ಅಶುತೋಷ್ ಮುಖರ್ಜಿ ಫೆಲೊಷಿಪ್ 2021-22 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಐಎಸ್‌ಎಸಿ ತನ್ನ ಆಜೀವ ಸದಸ್ಯರ ಸೇವೆಯನ್ನು ಪಡೆಯುವ ಸಲುವಾಗಿ ಅಶುತೋಷ್ ಮುಖರ್ಜಿ ಫೆಲೊಷಿಪ್ ಹೆಸರಿನಲ್ಲಿ 10 ಹಿರಿಯ ಫೆಲೊಷಿಪ್‌ಗಳನ್ನು ಸ್ಥಾಪಿಸಿದೆ. ಪ್ರೊ.ಕೆ.ಎಸ್. ರಂಗಪ್ಪ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರತಿಷ್ಠಿತ ಗೌರವ ನೀಡಲಾಗಿದೆ. ಈ ಫೆಲೊಷಿಪ್ ಮೂರು ವರ್ಷಗಳ ಕಾಲ ವಾರ್ಷಿಕ ರೂ.3,60,000 ಗೌರವಧನವನ್ನು ಒಳಗೊಂಡಿದೆ.