ಜಿಲ್ಲೆ

ಭಾನುವಾರ ಎಚ್ಚೆಸ್ವಿ ಕಾವ್ಯ ಸಂಭ್ರಮ ಕಾರ್ಯಕ್ರಮ; ಗಾಯನ, ನೃತ್ಯ, ಗೌರವಾಭಿನಂದನೆ

ಬೆಂಗಳೂರು: ಜನಪ್ರೀತಿಯ ಕವಿ ಎಂದೇ ಪ್ರಸಿದ್ಧರಾಗಿರುವ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ 80ನೇ ಜನ್ಮದಿನೋತ್ಸವದ ಅಂಗವಾಗಿ ಉಪಾಸನ ಟ್ರಸ್ಟ್ ಮತ್ತು ಎಚ್ಚೆಸ್ವಿ ವಿದ್ಯಾರ್ಥಿ ಬಳಗದ ಸಹಯೋಗದಲ್ಲಿ ‘ಎಚ್ಚೆಸ್ವಿ ಕಾವ್ಯ ಸಂಭ್ರಮ’ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿದೆ.

ಎನ್‌ಆರ್ ಕಾಲೋನಿ ಬಸ್ ನಿಲ್ದಾಣದ ಮುಂಭಾಗ ಇರುವ ರಾಮಮಂದಿರ ಆವರಣದ ಪತ್ತಿ ಸಭಾಂಗಣದಲ್ಲಿ ಭಾನುವಾರ ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಚ್ಚೆಸ್ವಿ ಅವರ ಕುರಿತು ಸಾಕ್ಷ್ಯಚಿತ್ರ, ಪುಸ್ತಕಗಳು, ಭಾವಗುಚ್ಛ ಲೋಕಾರ್ಪಣೆ ಮತ್ತು ಗೌರವಾಭಿನಂದನೆ, ಗೀತಗಾಯನ, ಭಾವನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಮಾರಂಭದಲ್ಲಿ ಪ್ರಾಧ್ಯಾಪಕರಾದ ಡಾ.ವೆಂಕಟಾಚಲ ಹೆಗಡೆ, ಕವಿ ಡಾ.ಬಿ.ಆರ್.ಲಕ್ಷ್ಮಣರಾವ್, ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ, ಕವಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಹಿರಿಯ ನಟ ಶ್ರೀನಿವಾಸಪ್ರಭು ಹಾಗೂ ಎಚ್.ಎಸ್.ವೆಂಕಟೇಶಮೂರ್ತಿ ಪಾಲ್ಗೊಳ್ಳಲಿದ್ದಾರೆ.