ಜಿಲ್ಲೆ

ಬೆಳಗಾವಿ ಸೂಪರ್ ಸ್ಪೆಶಾಲಿಟಿ ಆಸ್ಪತೆಗೆ ಸಿಬ್ಬಂದಿ ಇಲ್ಲ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಸೂಪಸ್ ಸ್ಪೆಶಾಲಿಟಿ ಆಸ್ಪತ್ರೆಗೆ 640 ಸಿಬ್ಬಂದಿ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಆದರೆ, 120 ಸಿಬ್ಬಂದಿ ನೇಮಕಾತಿ ಅನುಮೋದನೆ ನೀಡಿದೆ. ಅದರಲ್ಲಿ 23 ಜನ ವೈದ್ಯರು ಅರ್ಜಿ ಸಲ್ಲಿಸಿದ್ದು, 8 ಜನ ನೇಮಗೊಂಡಿದ್ದಾರೆ. ಇನ್ನೂಳಿದ ಸಿಬ್ಬಂದಿ ನೇಮಕ ಆಗಿಲ್ಲ. ಸಿಬ್ಬಂದಿ ನೇಮಕಾತಿ ಆಗದಿರುವ ಹಿನ್ನೆಲೆ ಆಸ್ಪತ್ರೆ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಬಿಮ್ಸ್ ನಿರ್ದೇಶಕರು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ಮೊದಲು ಸಿಬ್ಬಂದಿ ಆರಂಭಿಸಿ ಆಮೇಲೆ ಉದ್ಘಾಟನೆ ಮಾಡೋಣ ಎಂದರು.