ಜಿಲ್ಲೆ

ಬಡ ವಿದ್ಯಾರ್ಥಿಗೆ ಎಚ್.ಪಿ.ಮಂಜುನಾಥ್ ನೆರವು

ನಾಗೇಶ ಎಸ್

ಹನಗೋಡು: ಹುಣಸೂರಿನ ಐಟಿಐ ಕಾಲೇಜಿನ ವಿದ್ಯಾರ್ಥಿಗೆ ಕಾಲೇಜಿನ ಶುಲ್ಕ ಭರಿಸುವ ಮೂಲಕ ಆತನ ಶಿಕ್ಷಣಕ್ಕೆ ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ನೆರವಾಗಿದ್ದಾರೆ.

ಹುಣಸೂರು ನಗರದ ಹಳ್ಳಿ ಮನೆ ಹೋಟೆಲ್‌ನಲ್ಲಿ ಆದಿತ್ಯವರ್ಮ ಎಂಬ ಬಡ ವಿದ್ಯಾರ್ಥಿಯ ತನ್ನ ವಿದ್ಯಾಭ್ಯಾಸಕ್ಕಾಗಿ ಸಪ್ಲೇಯರ್ ಆಗಿ ಕೆಲಸ ಮಾಡಿಕೊಂಡು ಹುಣಸೂರಿನ ಶ್ರೀ ಸತ್ಯಸಾಯಿ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆದರೆ ಕಾಲೇಜಿನ ಶುಲ್ಕ ಭರಿಸಲು ಹಾಗೂ ಪುಸ್ತಕ ಸಾಮಗ್ರಿ ಕೊಳ್ಳಲು ಹೋಟೆಲ್‌ನವರು ನೀಡುವ ಸಂಬಳ ಸಾಲುತ್ತಿರಲಿಲ್ಲ. ಹೀಗಾಗಿ ಆ.15ರಂದು ಹುಣಸೂರಿನ ಕಾಂಗ್ರೆಸ್ ಕಚೇರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಿಮಿತ್ತ ಎಚ್.ಪಿ.ಮಂಜುನಾಥ್ ಆಗಮಿಸಿದ್ದಾಗ ವಿದ್ಯಾರ್ಥಿ ಆದಿತ್ಯವರ್ಮ ಶುಲ್ಕ ಭರಿಸುವಂತೆ ಮನವಿ ಮಾಡಿದ್ದ. ಹೀಗಾಗಿ ಸ್ಥಳದಲ್ಲಿಯೇ ಕಾಲೇಜಿನ ಪ್ರಾಂಶುಪಾಲರೊಂದಿಗೆ ದೂರವಾಣಿ ಮೂಲಕ ಮಾಹಿತಿ ಪಡೆದು ಬಡ ವಿದ್ಯಾರ್ಥಿಯ ಕಾಲೇಜಿನ ಶುಲ್ಕವನ್ನು ನೀಡಿ ವಿದ್ಯಾಭ್ಯಾಸ ಮುಂದುವರಿಸುವಂತೆ ಪ್ರೋತ್ಸಾಹಿಸಿದರು.