ಜಿಲ್ಲೆ

ಗುಡ್​ಫ್ರೈಡೇ ಆಚರಣೆ ಹೇಗೆ ಈ ಸಲ?: ಆರ್ಚ್ ಬಿಷಪ್ ಏನಂತಾರೆ...

Mysuru Rural

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಗುಡ್​ಫ್ರೖೆಡೇ ಹಾಗೂ ಈಸ್ಟರ್ ಹಬ್ಬವನ್ನು ಮನೆಯಲ್ಲಿಯೇ ಆಚರಿಸುವಂತೆ ಕ್ರೈಸ್ತ ಸಮುದಾಯಕ್ಕೆ ಆರ್ಚ್ ಬಿಷಪ್ ಡಾ. ಪೀಟರ್ ಮಾಚಾಡೊ ಮನವಿ ಮಾಡಿದ್ದಾರೆ.

ಆರ್ಚ್ ಬಿಷಪ್ ಡಾ. ಪೀಟರ್ ಮಾಚಾಡೊ

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೋಮವಾರ ರಾತ್ರಿ ಜಯಮಹಲ್​ನ ನಿವಾಸದಲ್ಲಿ ಆರ್ಚ್ ಬಿಷಪ್ ಅವರನ್ನು ಭೇಟಿ ಮಾಡಿ, ಗುಡ್​ಫ್ರೈಡೇ ದಿನ ಚರ್ಚ್​ಗಳ ಬಾಗಿಲು ತೆರೆಯದಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿರುವ ಬಿಷಪ್, ಹಬ್ಬದಂದು ರಾಜ್ಯದ ಯಾವುದೇ ಭಾಗದಲ್ಲಿರುವ ಚರ್ಚ್ ತೆರೆಯುವುದಿಲ್ಲ. ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಸಮುದಾಯದ ಜನರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಚರ್ಚ್​ಗಳ ಬಾಗಿಲು ತೆರೆದರೆ ಹೆಚ್ಚು ಜನರು ಸೇರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಚರ್ಚ್​ಗಳ ಬಾಗಿಲು ತೆರೆಯುವುದಿಲ್ಲ. ಹಬ್ಬ ಆಚರಣೆ ವಿಧಾನವನ್ನು ಆನ್​ಲೈನ್ ಜಾಲತಾಣಗಳಲ್ಲಿ (ಯೂ ಟ್ಯೂಬ್) ಪ್ರಸಾರ ಮಾಡಲಾಗುವುದು. ಹೀಗಾಗಿ, ಅದನ್ನು ವೀಕ್ಷಿಸಿ ಮನೆಯಲ್ಲಿಯೇ ಮನೆ ಮಂದಿ ಸೇರಿ ಹಬ್ಬ ಆಚರಿಸುವಂತೆ ಬಿಷಪ್ ಕೋರಿದ್ದಾರೆ.

ಈಸ್ಟರ್ ಹಾಗೂ ಗುಡ್​ಫ್ರೈಡೇಗೆ ಸಂಬಂಧಿಸಿದಂತೆ ಬಿಷಪ್ ಭಾಷಣವನ್ನು ಆನ್​ಲೈನ್​ನಲ್ಲೇ ಅಪ್​ಲೋಡ್ ಮಾಡುವುದಾಗಿ ತಿಳಿಸಿದ್ದಾರೆ. ಗುಡ್​ಫ್ರೈಡೇ ದಿನದಂದು ಯಾರೂ ಚರ್ಚ್​ಗೆ ಬರುವುದು ಬೇಡ ಎಂದು ಹೇಳಿದ್ದಾರೆ. ಈಗಾಗಲೇ ಕ್ರೈಸ್ಥ ಬಾಂಧವರಲ್ಲಿ ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಮನವಿ ಮಾಡಲಾಗಿದೆ.

| ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ