ಜಿಲ್ಲೆ

ಕೆಂಪೇಗೌಡರ ಮಾಗಡಿ ಇಬ್ಭಾಗವಾದರೂ ಸುಮ್ಮನಿರಲು ಹೇಗೆ ಸಾಧ್ಯ?

ಮಾಗಡಿ: ನೆಲಮಂಗಲ ತಾಲೂಕಿಗೆ ಸೋಲೂರು ಹೋಬಳಿ ಸೇರ್ಪಡೆ ಅಧಿಸೂಚನೆ ಬೆನ್ನಲ್ಲೇ ಮಾಗಡಿ ತಾಲೂಕಿನಲ್ಲಿ ಆದೇಶದ ವಿರುದ್ಧ ಹೋರಾಟದ ಸ್ವರೂಪ ದಿನೇದಿನೆ ಹೆಚ್ಚುತ್ತಿದೆ.

ನಾಡಪ್ರಭು ಕೆಂಪೇಗೌಡರು ಮಾಗಡಿಯ ಭೂ ಭಾಗವನ್ನು ಶಿವಗಂಗೆಯಿಂದ ಮಂಡ್ಯದವರೆಗೂ ವಿಸ್ತರಿಸಿದ್ದರು. ಆದರೆ, ಇಲ್ಲಿನ ಶಾಸಕರು ಕೆಂಪೇಗೌಡರ ಆಳ್ವಿಕೆಯ ಭೂಭಾಗ ಬೇರೆ ಜಿಲ್ಲೆಗಳಿಗೆ ಸೇರ್ಪಡೆಯಾಗುತ್ತಿದ್ದರೂ ನೋಡಿಕೊಂಡು ಕೂತಿದ್ದಾರೆ ಎಂದು ಪಟ್ಟಣದಲ್ಲಿ ಭಾನುವಾರ ರೈತರು, ಕನ್ನಡ ಮತ್ತು ದಲಿತ ಸಂಟನೆಗಳ ಪ್ರಮುಖರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಸರ್ಕಾರದ ಆದೇಶ ಖಂಡಿಸಿ ಕಂದಾಯ ಇಲಾಖೆಗೆ ಮನವಿ, ಕಾನೂನು ಹೋರಾಟದೊಂದಿಗೆ ರಾಜ್ಯಪಾಲರ ಭೇಟಿಗೂ ರ್ನಿಣಯಿಸಿದರು.

ತಾಲೂಕು ಟಿಎಪಿಎಂಸಿಎಸ್​ ಅಧ್ಯಕ್ಷ ಎಚ್​.ಆರ್​.ಶಿವಪ್ರಸಾದ್​ ಮಾತನಾಡಿ, ಸೋಲೂರು ಹೋಬಳಿಯ ಸಹಕಾರ ಸಂ, ಡೇರಿ ಹಾಗೂ ಶಿಕ್ಷಣ ಸಂಸ್ಥೆಗಳೆಲ್ಲವನ್ನೂ ನೆಲಮಂಗಲಕ್ಕೆ ಸೇರಿಸಿದರೆ ಮಾಗಡಿ ಚಿಕ್ಕ ತಾಲೂಕಾಗಲಿದೆ. ಈಗ ಸೋಲೂರಿನ ಜನರಿಗೆ ಸಮಸ್ಯೆಯಾಗುತ್ತದೆಂದು ನೆಲಮಂಗಲಕ್ಕೆ ಸೇರಿಸಿದಂತೆ ಮಾಗಡಿ ತಾಲೂಕು ಕೇಂದ್ರ 30 ಕಿಮೀ, ರಾಮನಗರ ಜಿಲ್ಲಾ ಕೇಂದ್ರ 65 ಕಿಮೀ ದೂರವಿದೆ. ಆದರೆ, ಕುಣಿಗಲ್​ ಕೇವಲ 8 ಕಿಮೀ, ತುಮಕೂರು 30 ಕಿಮೀ ಅಂತರದಲ್ಲಿದ್ದು ನಮ್ಮನ್ನು ತುಮಕೂರು ಜಿಲ್ಲೆಗೆ ಸೇರಿಸಿ ಎಂದು ತಿಪ್ಪಸಂದ್ರ ಹೋಬಳಿ ಜನ ಕೇಳಿದರೆ ಏನು ಮಾಡುತ್ತೀರಿ?. ಸೋಲೂರನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಲು ಕಾನೂನು ಹೋರಾಟ ಮಾಡಲಾಗುವುದು ಎಂದರು.

ತಾಪಂ ಮಾಜಿ ಸದಸ್ಯ ಸಿ.ಜಯರಾಮು ಮಾತನಾಡಿ, ಸೋಲೂರಿನಂತೆ ಬೇರೆ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳಿಗೆ ಮತ ಚಲಾಯಿಸುವ 130ಕ್ಕೂ ಹೆಚ್ಚು ಹೋಬಳಿಗಳು ರಾಜ್ಯದಲ್ಲಿವೆ. ಆದರೆ ಸೋಲೂರನ್ನು ಮಾತ್ರ ಮಾಗಡಿಯಿಂದ ಬೇರ್ಪಡಿಸುವುದೇಕೆ ಎಂದು ಪ್ರಶ್ನಿಸಿದರು.

ಆದಾಯದ ಮೂಲವಾಗಿರುವ ಸೋಲೂರು ಹೋಬಳಿಯನ್ನು ತಾಲೂಕಿನಿಂದ ಬೇರ್ಪಡಿಸಿದರೆ ಮಾಗಡಿಗೆ ಅನುದಾನದಲ್ಲಿ ಕಡಿತವಾಗಲಿದ್ದು, ಮಾಗಡಿ ಶಾಸಕರು ಜವಾಬ್ದಾರಿ ಅರಿತು ತಾಲೂಕಿನ ಭೂಭಾಗವನ್ನು ರಸಿಕೊಳ್ಳಬೇಕು ಎಂದರು.

ಕರ್ನಾಟಕ ನವ ನಿರ್ಮಾಣ ವೇದಿಕೆ ಅಧ್ಯಕ್ಷ ರಾಜಣ್ಣ, ಗೌರವಾಧ್ಯಕ್ಷ ಮಹಾಂತೇಶ್​, ರಾಜ್ಯ ಉಪಾಧ್ಯಕ್ಷ ಆಗ್ರೋ ಪುರುಷೋತ್ತಮ್​, ಕೆಂಪೇಗೌಡ ರೈತಸಂಟನೆ ಅಧ್ಯಕ್ಷ ಬಾಳೆನಹಳ್ಳಿ ಶಿವಣ್ಣ, ರಾಜ್ಯ ಯುವ ಟಕ ಅಧ್ಯಕ್ಷ ಜಟ್ಟನಹಳ್ಳಿ ದಿನೇಶ್​, ಗೋಸಂರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರು, ಗೊಲ್ಲಹಳ್ಳಿ ರಾಜಣ್ಣ, ಸೋಮಶೇಖರ್​, ರೈತಸಂದ ಮುಖಂಡರಾದ ಬುಡಾನ್​ ಸಾಬ್​, ಶಿವಲಿಂಗಯ್ಯ, ರಾಮಣ್ಣ, ಶಿವರುದ್ರಯ್ಯ, ನಾಗರಾಜಯ್ಯ, ರವಿಕುಮಾರು ಇದ್ದರು.

37 ಸಾವಿರ ಎಕರೆ ಬಿಟ್ಟುಕೊಡುವಿರಾ? ಪರಿಸರ ಪ್ರೇಮಿ, ಹೋರಾಟಗಾರ ಕನ್ನಡ ಕುಮಾರ್​ ಮಾತನಾಡಿ, ತಾವರೆಕೆರೆ ತಾಲೂಕನ್ನು ಬೆಂಗಳೂರಿಗೆ ಸೇರಿಸಿದ ಪರಿಣಾಮ ಇಂದಿಗೂ ಅಲ್ಲಿನ ರೈತರು ದಾಖಲೆಗಳ ತಿದ್ದುಪಡಿಗೆ ಅಲೆದಾಡುತ್ತಿದ್ದಾರೆ. ಈ ಹಿಂದೆ ಶಾಸಕ ಬಾಲಕೃಷ್ಣ ಸೋಲೂರಿನ ಒಂದಿಂಚೂ ಭೂಮಿಯನ್ನು ಬೇರೆ ಜಿಲ್ಲೆಗೆ ಬಿಡುವುದಿಲ್ಲ ಎಂದಿದ್ದರು. ಆದರೀಗ 37 ಸಾವಿರ ಎಕರೆ ಭೂಮಿ ಬೇರೆ ಜಿಲ್ಲೆ ಸೇರುತ್ತಿದ್ದರೂ ಮಾತನಾಡದಿರುವುದು ಅನುಮಾನ ಮೂಡಿಸಿದೆ. ಇನ್ನು ಸೋಲೂರು ಉಳಿಸಿಕೊಳ್ಳಲು ಜನ ನನಗೆ ಬೆಂಬಲ ನೀಡಲಿಲ್ಲ, ನಾನೇನು ಮಾಡಲಿ ಎಂದು ಅಸಹಾಯಕತೆ ವ್ಯಕ್ತಪಡಿಸುವ ನಿಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿಲ್ಲವೇ?, ಜವಾಬ್ದಾರಿಯಿಂದ ಸೋಲೂರು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಬರೀ 12 ದಿನ ಸೋಲೂರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. ಇನ್ನು ಮಾಡಬಾಳ್​, ತಿಪ್ಪಸಂದ್ರ ಹೋಬಳಿಗಳು ಅಭಿವೃದ್ಧಿ ಹೊಂದಿಲ್ಲ. ಹಾಗಾಗಿ ಶ್ರೀದಲ್ಲಿ ಸೋಲೂರಿ ಹೋಬಳಿಯ 68 ಗ್ರಾಮಗಳ ಮನೆಮನೆಗೂ ತೆರಳಿ, ಜನರಿಗೆ ವಿಚಾರ ತಿಳಿಸಿ, ಹೆಚ್ಚಿನ ಆೇಪಣೆ ಸಲ್ಲಿಸಲಾಗುವುದು. ಮಾಗಡಿ ಭಾಗದಿಂದಲೂ ಜಾಗೃತಿ ಮೂಡಿಸಲಾಗುವುದು. ಆೇಪಣೆ ಸಲ್ಲಿಸಲು ಕೇವಲ 12 ದಿನಗಳು ಉಳಿದಿದ್ದು, ತರಾತುರಿಯಲ್ಲಿ ನಿರ್ಧಾರದ ಹಿಂದೆ ರಾಜಕೀಯ ಒಳಸಂಚಿದೆ. ಕಾನೂನು ಹೋರಾಟದ ಮೂಲಕ ರಾಜ್ಯಪಾಲರ ಭೇಟಿಗೂ ಅವಕಾಶ ಕೊರಲಿದ್ದೇವೆ ಎಂದು ಕನ್ನಡ ಕುಮಾರ್​ ಹೇಳಿದರು.