ಹೂವಿನಹಡಗಲಿ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳನ್ನು ಒಗ್ಗೂಡಿಸಲಾಯಿತು. ಸಿವಿಲ್ ನ್ಯಾಯಾಧೀಶೆ ಟಿ.ಅಕ್ಷತಾ, ವಕೀಲರ ಸಂಘದ ಅಧ್ಯಕ್ಷ ವಸಂತಕುಮಾರ್, ವಕೀಲರಾದ ಹಾಲೇಶ್‌ನಾಯ್ಕ, ಕೆ.ಸೈಫುಲ್ಲಾ ಇತರರಿದ್ದರು. 
ಜಿಲ್ಲೆ

ಲೋಕ ಅದಾಲತ್‌ನಲ್ಲಿ 607 ಕೇಸ್ ಇತ್ಯರ್ಥ

ಹೂವಿನಹಡಗಲಿ: ವಿಚ್ಛೇದನಕ್ಕಾಗಿ ನಾಲ್ಕು ವರ್ಷದಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದ ತಾಲೂಕಿನ ಕಾಲ್ವಿತಾಂಡಾದ ದೇವರಾಜ ಹಾಗೂ ಲಕ್ಷ್ಮೀಬಾಯಿ ದಂಪತಿ ಶನಿವಾರ ಲೋಕ ಅದಾಲತ್‌ನಲ್ಲಿ ರಾಜಿಯಾಗುವ ಮೂಲಕ ಮತ್ತೆ ಒಂದಾದರು.

ದಂಪತಿಗೆ 10ವರ್ಷದ ಮಗುವಿದ್ದು, ಆ ಮಗುವಿನ ಭವಿಷ್ಯ ಗಮನಿಸಿ ಸಂಸಾರದಲ್ಲಿ ಬರುವ ಸಣ್ಣ-ಪುಟ್ಟ ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸಬೇಕು ಎಂದು ಸಿವಿಲ್ ನ್ಯಾಯಾಧೀಶೆ ಟಿ.ಅಕ್ಷತಾ ತಿಳಿ ಹೇಳುವ ಮೂಲಕ ದಂಪತಿಗಳನ್ನು ಒಗ್ಗೂಡಿಸಿದ್ದಾರೆ.

ಲೋಕ ಅದಾಲತ್‌ನಲ್ಲಿ ಸುಮಾರು 665 ಪ್ರಕರಣಗಳಲ್ಲಿ 607ರಾಜಿ ಸಂಧಾನ ಮಾಡುವ ಮೂಲಕ 82,74,825 ರೂ. ಪರಿಹಾರ ಕೊಡಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷ ಜ್ಯೋತಿಮಲ್ಲಣ್ಣ, ಕಾರ್ಯದರ್ಶಿ ಸಿದ್ದನಗೌಡ, ಸಹಕಾರ್ಯದರ್ಶಿ ಎಸ್.ಬಸವರಾಜ್, ಖಜಾಂಜಿ ಎಂ.ಪಿ.ಎಂ.ಪ್ರಸನ್ನ, ಮಹಿಳಾ ಪ್ರತಿನಿಧಿ ಸುಜಾತಾ, ವಕೀಲ ಎಂ.ಎನ್.ಮಂಜುನಾಥ ಇದ್ದರು.

19 ಪ್ರಕರಣಗಳು ರಾಜಿ ಸಂಧಾನ


ಬಳ್ಳಾರಿ: ನಗರದ ಡಿಸಿ ಕಚೇರಿ ಆವರಣದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕೋರ್ಟ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 24 ಪ್ರಕರಣಗಳ ಪೈಕಿ 19 ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. 93.81 ಲಕ್ಷ ರೂ. ಪಕ್ಷಗಾರರು ಪಡೆದಿರುತ್ತಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.