KONDAPPA 
ಜಿಲ್ಲೆ

ಅವಾಸ ಯೋಜನೆ ಸಮೀಕ್ಷೆ ಮಂದಗತಿ

Raichur - Reporter - Rachhai Swamy

ರಾಯಚೂರು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ಅವಽ ವಿಸ್ತರಣೆ ಮಾಡಿದ್ದರೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಮೀಕ್ಷೆ ನಡೆಯುತ್ತಿಲ್ಲವೆಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಕೊಂಡಪ್ಪ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮ ಪಂಚಾಯ್ತಿ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತರ ಪಟ್ಟಿಯನ್ನು ಸಿದ್ದಪಡಸಿ ಜಿಪಿಎಸ್ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಪಂಚಾಯತಿಯಲ್ಲಿ ಸಮೀಕ್ಷೆ ನಡೆಯುತ್ತಿಲ್ಲ.

ಅರ್ಹರನ್ನು ಗುರುತಿಸುವ ಕೆಲಸ ನಡೆಯುತ್ತಿಲ್ಲ ಎಂದರು. ಕೇಂದ್ರ ಸರ್ಕಾರದ ಸೂಚನೆ ಮೇರಗೆ ವಸತಿ, ನಿವೇಶನ ರಹಿತರನ್ನು ಗುರುತಿಸಿ ಪಟ್ಟಿಯನ್ನು ಸಲ್ಲಿಸಬೇಕಿದ್ದು ಯಾವ ಪಂಚಾಯ್ತಿಯಲ್ಲಿಯೂ ನಿರೀಕ್ಷೆಯಂತೆ ಸಮೀಕ್ಷೆ ನಡೆಯುತ್ತಿಲ್ಲ. ದೇವದುರ್ಗ, ಮಾನ್ವಿ ತಾಲೂಕಿನ ಗ್ರಾಮ ಪಂಚಾಯ್ತಿಗಳಲ್ಲಿ ಪಂಚಾಯ್ತಿ ಸದಸ್ಯರುಗಳು, ಅಽಕಾರಿಗಳು ಮನೆ ಆಯ್ಕೆಗೆ ಹಣ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವೆಂಕಟೇಶ, ರಾಜ್ಯ ಸಂಚಾಲಕ ಚಿದಾನಂದಪ್ಪ.ಕೆ, ಮಹೇಶ ಪಾಟೀಲ್, ವೀರೇಶ ಜಲಗಾರ, ಭೀಮನಗೌಡ, ತಿಕ್ಕಣ್ನ ಇದ್ದರು.