ಬೇತಮಂಗಲ: ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ವಾಡಿಕೊಂಡಿದ್ದಾರೆ.
ಹೋಬಳಿಯ ಕಮ್ಮಸಂದ್ರ ಗ್ರಾಮದ ತಿಪ್ಪಮ್ಮ (40), ಮೌನಿಕ (7) ನಿತೀಶ್ (4) ಮೃತರು.
ಪತಿ ಮಣಿ (45) ಎಂಬಾತ ಕೋಟಿಲಿಂಗ ದೇವಾಲಯದಲ್ಲಿರುವ ಗೋಶಾಲೆಯಲ್ಲಿ ಕೆಲಸ ವಾಡುತ್ತಿದ್ದು, ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಮದುವೆಯಾಗಿ 20ವರ್ಷದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಆದರೆ, ಇತ್ತೀಚೆಗೆ ಹೆಂಡತಿ ಮತ್ತು ಮಕ್ಕಳೊಂದಿಗೆ ನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಪತಿಯ ಗಲಾಟೆ ಸಹಿಸದ ತಿಪ್ಪಮ್ಮ ಮಂಗಳವಾರ ರಾತ್ರಿ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತೆ ತಿಪ್ಪಮ್ಮ ತವರು ಮನೆಯವರು ಕೆಜಿಎಫ್ ಬೆಮೆಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.