ಜಿಲ್ಲೆ

ಗೃಹಿಣಿ ನಾಪತ್ತೆ

ಪ್ರಸಿನ್ ಕೆ.ಆರ್

ಕೆ.ಆರ್.ನಗರ: ತಾಲೂಕಿನ ಕಸಬಾ ಹೋಬಳಿಯ ಸಾತಿಗ್ರಾಮದ ಗೋಪಾಲ ಎಂಬುವರ ಪತ್ನಿ ಕಮಲಾಕ್ಷಿ(46) ಭಾನುವಾರದಿಂದ ಕಾಣೆಯಾಗಿದ್ದಾರೆ ಎಂದು ಪುತ್ರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜು.20 ರಂದು ಬೆಳಗ್ಗೆ 11ಗಂಟೆ ಸಮಯಕ್ಕೆ ಮನೆಯಿಂದ ಹೋಗಿದ್ದು, ಸಂಬಂಧಿಕರು ಮತ್ತು ಸ್ನೇಹಿತರು ಅಕ್ಕ-ಪಕ್ಕದ ಗ್ರಾಮದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಚಹರೆ: ದುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ, 5 ಅಡಿ ಎತ್ತರ, ಸಾಧಾರಣ ಮೈ ಕಟ್ಟು ಮನೆಯಿಂದ ಹೋಗುವಾಗ ಹಸಿರು ಸೀರೆ ಧರಿಸಿದ್ದಾರೆೆ. ಗುರುತು ಪತ್ತೆಯಾದಲ್ಲಿ ಕೆ.ಆರ್.ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.