ಜಿಲ್ಲೆ

ಗೃಹಿಣಿಗೆ 19.49 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ವರ್ಕ್ ಫ್ರಾಮ್ ಹೋಮ್ ಹೆಸರಿನಲ್ಲಿ ಟಾಸ್ಕ್ ಕೊಟ್ಟು, ಹಣ ಹೂಡಿಕೆ ಮಾಡಲು ಹೇಳಿದ ಅಪರಿಚಿತರು, ಇಲ್ಲಿಯ ಗಾಮನಗಟ್ಟಿ ದೇಸಾಯಿ ನಗರದ ಗೃಹಿಣಿಯೊಬ್ಬರಿಂದ ಆರ್‌ಟಿಜಿಎಸ್, ಫೋನ್ ಪೇ ಮೂಲಕ 19.49 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಅಕ್ಷತಾ ವಂಚನೆಗೆ ಒಳಗಾದವರು. ಇವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿನ ವರ್ಕ್ ಫ್ರಾಮ್ ಹೋಮ್ ಎಂಬ ಜಾಹೀರಾತು ತೆರೆದಿದ್ದಾರೆ. ಆಗ ಖದೀಮರು ಅವರ ವಾಟ್ಸ್‌ಆ್ಯಪ್‌ನಲ್ಲಿ ಕೋಡ್‌ವೊಂದನ್ನು ಕಳುಹಿಸಿ, ಟೆಲಿಗ್ರಾಮ್‌ನಲ್ಲಿ ಆ ಕೋಡ್ ಹಾಕಿಸಿದ್ದಾರೆ. ನಂತರ ವಿವಿಧ ಟಾಸ್ಕ್ ನೀಡುತ್ತಾ ಪೂರ್ಣಗೊಳಿಸುವಂತೆ ಹೇಳಿ, ಹಣ ಹೂಡಿಕೆ ಮಾಡುವಂತೆ ತಿಳಿಸಿ ಆನ್‌ಲೈನ್ ಮೂಲಕ, ತದನಂತರ ಟೆಲಿಗ್ರಾಂ ಗ್ರೂಪ್‌ನಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಹಣ ವಾಪಸ್ ಕೇಳಿದಾಗ, ಟಾಸ್ಕ್ ಪೂರ್ಣ ಮಾಡಿದರೆ ಮಾತ್ರ ಹಣ ವಿಥ್ ಡ್ರಾ ಮಾಡಲು ಬರುತ್ತದೆ ಎಂದು ಹೇಳಿ, ಮತ್ತೆ ಹಣ ಹಾಕಲು ಹೇಳಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಅಕ್ಷತಾ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.