ಜಿಲ್ಲೆ

ಕಲಬುರಗಿಯಲ್ಲಿ ಖರ್ತನ್ನಾಕ್ ಕಳ್ಳರ ಕೈಚಳಕ : ಮನೆ ಬೀಗ ಮುರಿದು  ಚಿನ್ನಾಭರಣ ಕಳವು

ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ  ಶಿವಲಿಂಗೇಶ್ವರ ಕಾಲನಿಯಲ್ಲಿ ಮನೆಯೊಂದರ ಬೀಗ ಮುರಿದು ೬೬ ಗ್ರಾಂ ಚಿನ್ನಾಭರಣ ಕಳವು ಮಾಡಿಕೊಂಡು ಹೋದ ಘಟನೆ ನಡೆದಿದೆ.

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ  ಶಿವಲಿಂಗೇಶ್ವರ ಕಾಲನಿಯಲ್ಲಿ ಮನೆಯೊಂದರ ಬೀಗ ಮುರಿದು ೬೬ ಗ್ರಾಂ ಚಿನ್ನಾಭರಣ ಕಳವು ಮಾಡಿಕೊಂಡು ಹೋದ ಘಟನೆ ನಡೆದಿದೆ.
ಹಾಸ್ಟೇಲ್ ವಾರ್ಡನ್ ಆಗಿರುವ ರೂಪಾ ಸಾಗರ ಎಂಬುವರ ಮನೆಯಲ್ಲಿಯೇ ಕಳ್ಳತನ ಮಾಡಲಾಗಿದೆ. ಮನೆಯವರೆಲ್ಲರು ಮಲಗಿಕೊಂಡಿದ್ದಾಗ ಕಳ್ಳರು ಹಿಂದಿನ ಬಾಗಿಲ ಬೀಗ ಮುರಿದು ಆಲಮರಾ ಒಡೆದು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು. ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.