ಜಿಲ್ಲೆ

ಹೊಸಪಾಳ್ಯ ಗ್ರಾಮದಲ್ಲಿ ಮನೆಗಳವು

ಕುದೂರು: ಹೋಬಳಿಯ ನಾರಸಂದ್ರ ಸಮೀಪದ ಹೊಸಪಾಳ್ಯ ಗ್ರಾಮದ ಮನೆಯೊಂದರಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಬೀಗ ಮುರಿದು ಚಿನ್ನಾಭರಣ ಹಾಗೂ ನಗದನ್ನು ಇತ್ತೀಚೆಗೆ ಕಳವು ಮಾಡಿದ್ದಾರೆ.

ಬೀರುವಿನಲ್ಲಿದ್ದ 34 ಗ್ರಾಂ ಚಿನ್ನ ಹಾಗೂ 150 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 1.50 ಲಕ್ಷ ನಗದು ಕಳುವಾಗಿದೆ ಎಂದು ನರಸಿಂಹಮೂರ್ತಿ ಎಂಬುವವರು ಕುದೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.