ಶಿರಸಿ: ಪೌರ ಕಾರ್ವಿುಕರಿಗಾಗಿ ನಿರ್ವಿುಸಲಾಗುತ್ತಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಮನೆಯಿಲ್ಲದ ಪೌರ ಕಾರ್ವಿುಕರಿಗೂ ಸರ್ಕಾರದಿಂದ ಮನೆ ಮಂಜೂರು ಮಾಡಿಸಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಅಕ್ಷಯ ಗಾರ್ಡನ್ನಲ್ಲಿ ಮಂಗಳವಾರ ನಗರಸಭೆಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ವಿುಕ ದಿನಾಚರಣೆಯಲ್ಲಿ ಪೌರ ಕಾರ್ವಿುಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಮುಂದಿನ ಭವಿಷ್ಯ ಯೋಚಿಸದೇ ಪೌರ ಕಾರ್ವಿುಕರು ಕಾಯಕವನ್ನು ಪ್ರತಿ ದಿನ ಮಾಡುತ್ತಿದ್ದಾರೆ. ಬೆಳಕು ಹರಿಯುವ ಒಳಗೆ ನಗರದ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸುವ ಅವರ ಕಾರ್ಯ ಶ್ಲಾಘನೀಯ. ದಿನಗೂಲಿ ನೌಕರರಿಗೆ ನೌಕರಿಯ ಭದ್ರತೆಯನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದರು.
ಪೌರ ಕಾರ್ವಿುಕರು ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಬೇಕು. ನಗರಸಭೆ ಆವರಣದಲ್ಲಿ ಇದಕ್ಕಾಗಿ ಪ್ರತ್ಯೇಕ ಕೊಠಡಿಯೊಂದನ್ನು ಸ್ಥಾಪಿಸಿ, ವಾರಕ್ಕೆ ಒಮ್ಮೆಯಾದರೂ ತಪಾಸಣೆ ಮಾಡಬೇಕು. ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಪೌರ ಕಾರ್ವಿುಕರ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಪೌರ ಕಾರ್ವಿುಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕಿದೆ. ಈ ಕುರಿತು ಅಧಿಕಾರಿ ವರ್ಗ ಕಾಳಜಿ ವಹಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ನಗರ ಯೋಜನಾ ಘಟಕದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ದೀಪಾ ಮಹಾಲಿಂಗಣ್ಣ, ಖಾದರ ಆನವಟ್ಟಿ, ಜ್ಯೋತಿಗೌಡ ಪಾಟೀಲ, ಪ್ರದೀಪ ಶೆಟ್ಟಿ, ಆರ್.ಎಂ. ವೆರ್ಣೆಕರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೇಶವಮೂರ್ತಿ ಇತರರಿದ್ದರು.
ಮುಡಾ ಹಗರಣ ಬಿಜೆಪಿಯ ಸೃಷ್ಟಿ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿಲ್ಲ. ಬಿಜೆಪಿ ರಾಜ್ಯಪಾಲರನ್ನು ಅಸ್ತ್ರವಾಗಿ ಬಳಸಿಕೊಂಡು ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರುವ ಯತ್ನ ನಡೆಸಿದೆ. ಪ್ರಾಸಿಕ್ಯೂಶನ್ ತನಿಖೆ ನಡೆಸಿದರೆ ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮುಂದೆ ಸಹ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಭೀಮಣ್ಣ ನಾಯ್ಕ ಹೇಳಿದರು.