ಉಪ್ಪಿನಬೆಟಗೇರಿ: ಕಳೆದ ಐದಾರು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಸಾವಿತ್ರಿ ಕಲ್ಲೂರಮಠ ಎಂಬುವರ ಅಡುಗೆ ಮನೆಯ ಗೋಡೆಯು ಮಳೆಯ ನೀರಿನ ತೇವಾಂಶದಿಂದಾಗಿ ಭಾನುವಾರ ರಾತ್ರಿ ಛಾವಣಿ ಸಹಿತ ಕಳಚಿಕೊಂಡು ಬಿದ್ದಿದೆ. ಅಡುಗೆ ಮನೆಯಲ್ಲಿದ್ದ ಪಾತ್ರೆ, ಅಹಾರ ಸಾಮಗ್ರಿ ಸೇರಿ ಇತರ ವಸ್ತುಗಳು ಮಣ್ಣಿನಡಿ ಹೂತು ಹೋಗಿವೆ. ಈ ವೇಳೆ ಮನೆಯವರು ಮುಂಭಾಗದ ಛಾವಣಿಯಲ್ಲಿ ಮಲಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.